ರಕುಲ್ ಪ್ರೀತ್ ಸಿಂಗ್ ಮೇಲೆ ದುಲ್ಕರ್ ಸಲ್ಮಾನ್ ಅಭಿಮಾನಿಗಳು ಸಿಟ್ಟಾಗಿದ್ಯಾಕೆ?

Webdunia
ಶುಕ್ರವಾರ, 1 ಜೂನ್ 2018 (06:30 IST)
ಹೈದರಾಬಾದ್ : ಟಾಲಿವುಡ್ ರಕುಲ್ ಪ್ರೀತ್ ಸಿಂಗ್ ಅವರು ಇದೀಗ ಸಾಮಾಜಿಕ ಜಾಲತಾಣದಲ್ಲಿ ದುಲ್ಕರ್ ಸಲ್ಮಾನ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.


ಇದಕ್ಕೆ ಕಾರಣವೆನೆಂದರೆ ಈಗಾಗಲೇ ಬಿಡುಗಡೆಗೊಂಡು  ಸಾಕಷ್ಟು ಸದ್ದು ಮಾಡಿರುವ ನಟಿ ಸಾವಿತ್ರಿ ಜೀವನ ಚರಿತ್ರೆ ಆಧರಿಸಿರುವ 'ಮಹಾನಟಿ' ಚಿತ್ರವನ್ನು ನೋಡಿ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅದೇರೀತಿ  ಟಾಲಿವುಡ್ ರಕುಲ್ ಪ್ರೀತ್ ಸಿಂಗ್ ಅವರು ಕೂಡ ಈ ಸಿನಿಮಾವನ್ನು ನೋಡಿ ಅದರಲ್ಲಿ ಅಭಿನಯಿಸಿರುವ ಕೀರ್ತಿ ಸುರೇಶ್‌‌, ಸಮಂತ ಅಕ್ಕಿನೇನಿ ಹಾಗೂ ವಿಜಯ್‌ ದೇವರಕೊಂಡ ಅವರ ಹೆಸರನ್ನು ಟ್ವೀಟರ್ ನಲ್ಲಿ ಬರೆದು ಅಭಿನಂದನೆ ಸಲ್ಲಿಸಿದ್ದಾರೆ. ಆದರೆ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಒಬ್ಬರಾದ ದುಲ್ಕರ್ ಸಲ್ಮಾನ್ ಹೆಸರನ್ನು ಪೋಸ್ಟ್‌ನಲ್ಲಿ ಸೇರಿಸಿಲ್ಲ.


ಇದು ಈಗ ದುಲ್ಕರ್ ಸಲ್ಮಾನ್ ಅಭಿಮಾನಿಗಳ ಕೋಪಕ್ಕೆ ಕಾರಣವಾಗಿದ್ದು, ಚಿತ್ರದಲ್ಲಿ ಕೀರ್ತಿ ಸುರೇಶ್ ಪಾತ್ರ ಎಷ್ಟು ಮುಖ್ಯವೋ ದುಲ್ಕರ್ ಪಾತ್ರ ಕೂಡಾ ಅಷ್ಟೇ ಮುಖ್ಯ. ಆದರೆ ಅವರ ಹೆಸರನ್ನೇ ಬಿಟ್ಟಿರುವುದು ಎಷ್ಟು ಸರಿ. ನೀವು ಸರಿಯಾಗಿ ಸಿನಿಮಾ ನೋಡದೇ ನಿದ್ದೆ ಮಾಡಿ ಬಂದ ಹಾಗಿದೆ. ಹಾಗಾಗಿ ಇನ್ನೊಮ್ಮೆ ಸಿನಿಮಾ ನೋಡುವುದು ಒಳ್ಳೆಯದು ಎಂದು ದುಲ್ಕರ್ ಸಲ್ಮಾನ್ ಅಭಿಮಾನಿಗಳು ರಕುಲ್ ಪ್ರೀತ್ ಸಿಂಗ್ ಮೇಲೆ ಕಿಡಿಕಾರಿದ್ದಾರೆ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸಲ್ಮಾನ್ ಖಾನ್ ಜೊತೆ ನಟಿಸಿದ್ದ ಖ್ಯಾತ ಬಾಡಿ ಬಿಲ್ಡರ್ ವರೀಂದರ್ ಘುಮಾನ್ ಇನ್ನಿಲ್ಲ

ಒಂದೇ ವಾರಕ್ಕೆ ₹ 510 ಕೋಟಿ ಚಾಚಿಕೊಂಡ ಕಾಂತಾರ ಪ್ರೀಕ್ವೆಲ್‌: ಹಲವು ದಾಖಲೆಗಳು ಉಡೀಸ್‌

ಸರ್ಕಾರ ಬಿಟ್ಟರೂ ನಾವು ಬಿಡಲ್ಲ: ಬಿಗ್ ಬಾಸ್ ಮನೆ ಗೇಟ್ ಏರಿ ಕನ್ನಡ ಪರ ಹೋರಾಟಗಾರರ ಹೋರಾಟ

ರಿಷಬ್ ಶೆಟ್ಟಿ ಹೈದರಾಬಾದ್ ನಲ್ಲಿ ಕನ್ನಡ ಮಾತನಾಡಿದ್ದು ಇದೇ ಕಾರಣಕ್ಕೆ

ತೆರೆದ ದೊಡ್ಮನೆ, ನನ್ನ ಕರೆಗೆ ತಕ್ಷಣವೇ ಸ್ಪಂದಿಸಿದ ಡಿಕೆ ಶಿವಕುಮಾರ್ ಧನ್ಯವಾದ: ಕಿಚ್ಚ ಸುದೀಪ್ ಪೋಸ್ಟ್

ಮುಂದಿನ ಸುದ್ದಿ
Show comments