ಹೀರೋ ಒಬ್ಬ ಕೇವಲ ತೆರೆ ಮೇಲೆ ಹೀರೋ ಆದ್ರೆ ಸಾಲದು ಆತ ನಿಜಜೀವನದಲ್ಲೂ ಅದೇ ರೀತಿ ಬದುಕಬೇಕು ಅನ್ನೋದಕ್ಕೆ ಉದಾಹರಣೆ ಸ್ಯಾಂಡಲ್ ವುಡ್ ಹೀರೋ ಯಶ್ ವರು ಉತ್ತಮ ಉದಾಹರಣೆಯ ತೆರೆ ಮೇಲೆ ಕೋಟ್ಯಂತರ ಮಂದಿಯನ್ನು ರಂಜಿಸೋ ಇವರು ನಿಜ ಜೀವನದಲ್ಲಿ ಇಡೀ ಕರ್ನಾಟಕದ ಜನರೇ ಮೆಚ್ಚುವಂತಹ ಕೆಲಸವನ್ನು ಮಾಡುತ್ತಿದ್ದಾರೆ.
ಮೊನ್ನೆಯಷ್ಟೇ ಕುಡಿಯುವ ನೀರಿಗಾಗಿ ಪರದಾಡುತ್ತಿದ್ದ ಉತ್ತರ ಕರ್ನಾಟಕದ 50 ಹಳ್ಳಿಗಳ ಜನರಿಗೆ ರಾಕಿಂಗ್ ಸ್ಟಾರ್ ಕುಡಿಯುವ ನೀರನ್ನು ಒದಗಿಸುವ ಮೂಲಕ ಅಲ್ಲಿನ ಜನರ ದಾಹವನ್ನು ನೀಗಿಸಿದ್ರು. ಇದೀಗ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಂಜಿಗೆ ಗ್ರಾಮದ ಜನರ ನೋವಿಗೂ ಯಶ್ ಸ್ಪಂದಿಸಿದ್ದಾರೆ.
ತಮ್ಮ ಯಶೋಮಾರ್ಗ ಫೌಂಡೇಷನ್ ವತಿಯಿಂದ ಟ್ಯಾಂಕರ್ ಮೂಲಕ ಹಂಜಿಗೆ ಗ್ರಾಮದ ಜನರಿಗೆ ನೀರು ಪೂರೈಕೆ ಮಾಡಿದ್ದಾರೆ. ಸ್ಥಳೀಯ ಜನಪ್ರತಿನಿಧಿಗಳು ಕೂಡ ಯಶ್ ಅವರ ಈ ಕಾರ್ಯಕ್ಕೆ ಸಾಥ್ ನೀಡಿದ್ದಾರೆ. ಸುಮಾರು 25 ಹಳ್ಳಿಗಳಿಗೆ ನೀರು ಪೂರೈಸಿರುವ ಯಶ್ ಆ ಮೂಲಕ ನಾನೊಬ್ಬ ಹೀರೋ ಅನ್ನೋದನ್ನು ತೋರಿಸಿಕೊಟ್ಟಿದ್ದಾರೆ.
ಕೇವಲ ತೆರೆ ಮೇಲೆ ಉತ್ತಮ ಪಾತ್ರಗಳನ್ನು ಮಾಡಿ ರಂಜಿಸೋ ಬದಲು ಇದೇ ರೀತಿ ನಿಜ ಜೀವನದಲ್ಲೂ ಒಂದಷ್ಟು ಮಂದಿಗೆ ನೆರವಾಗುವ ಕೆಲಸವನ್ನು ತಾರೆಯರು ಮಾಡಿದ್ರೆ ಜನ ಸಿನಿಮಾ ನೋಡಿ ಶಿಳ್ಳೆ, ಚಪ್ಪಾಳೆ ಹಾಕೋದಕ್ಕಿಂತ ಹೆಚ್ಚಿನ ಬೆಂಬಲವನ್ನು ಸಿನಿಮಾತಾರೆಯರಿಗೆ ನೀಡುತ್ತಾರೆ.ಆದ್ರೆ ಇದಕ್ಕೆ ಅವರೆಲ್ಲಾ ಮನಸ್ಸು ಮಾಡಬೇಕು ಅಷ್ಟೇ.