Select Your Language

Notifications

webdunia
webdunia
webdunia
webdunia

ಸ್ನೇಹಿತನ ಜೀವ ಉಳಿಸಲು ನಟಿ ಸನ್ನಿ ಲಿಯೋನ್ ಮಾಡಿದ್ದೇನು ಗೊತ್ತೇ?

ಸ್ನೇಹಿತನ ಜೀವ ಉಳಿಸಲು ನಟಿ ಸನ್ನಿ ಲಿಯೋನ್ ಮಾಡಿದ್ದೇನು ಗೊತ್ತೇ?
ಮುಂಬೈ , ಸೋಮವಾರ, 13 ಆಗಸ್ಟ್ 2018 (07:39 IST)
ಮುಂಬೈ : ಮಾಜಿ ನೀಲಿ ಚಿತ್ರ ತಾರೆ, ಬಾಲಿವುಡ್ ನಟಿ ಸನ್ನಿ ಲಿಯೋನ್​ ಅವರು ಕಿಡ್ನಿ ಕಳೆದುಕೊಂಡು ಸಾವು-ಬದುಕಿನ ಜೊತೆ ಹೋರಾಟ ನಡೆಸುತ್ತಿರುವ ತಮ್ಮ ಆಪ್ತ ಸ್ನೇಹಿತನಿಗೆ ಸಹಾಯ ಮಾಡಿ ದೇವತೆ ಎನಿಸಿಕೊಂಡಿದ್ದಾರೆ.


ಹೌದು. ಸನ್ನಿ ಲಿಯೋನ್ ಆಪ್ತ ಸಹಾಯಕ ಪ್ರಭಾಕರ್​ ಎಂಬಾತ ಕಳೆದ ಒಂದು ವರ್ಷದಿಂದ ಅನಾರೋಗ್ಯ ದಿಂದ ಬಳಲುತ್ತಿದ್ದು, ಅದಕ್ಕೆ ಚಿಕಿತ್ಸೆ ಕೂಡ ಪಡೆಯುತ್ತಿದ್ದರಂತೆ. ಆದರೆ ಆತನಿಗೆ ನಿಜವಾದ ಕಾಯಿಲೆ ಏನು ಎಂಬುದು ಗೊತ್ತಿರಲಿಲ್ಲವಂತೆ. ಈ ಕುರಿತು ವಿಚಾರಿಸಿದ ಸನ್ನಿ, ನಂತರ ಆತನನ್ನು ಒಳ್ಳೆಯ ಆಸ್ಪತ್ರೆಗೆ ದಾಖಲಿಸಿದಾಗ ಆ ವೇಳೆ ಆತನ ಕಿಡ್ನಿ ವೈಫಲ್ಯವಾಗಿರುವುದು ತಿಳಿದುಬಂದಿದೆ.


ಸಂಪೂರ್ಣ ಕಿಡ್ನಿ ವೈಫಲ್ಯದಿಂದ ಬದಲಿಗೆ ಅದೇ ರಕ್ತ ಮಾದರಿ ಹೊಂದುವ ಕಿಡ್ನಿಯನ್ನು ಅಳವಡಿಸುವ ಅವಶ್ಯಕತೆ ಇದೆ ಎಂದು ವೈದ್ಯರು ತಿಳಿಸಿದ ಕಾರಣ ಕಿಡ್ನಿ ದಾನಿಗಳಿ​ಗಾಗಿ ಹುಡುಕಾಟ ಕೂಡ ನಡೆದಿದೆಯಂತೆ. ಅಲ್ಲದೇ ಪ್ರಭಾಕರ್​ ಅವರ ಆರೋಗ್ಯ ಜವಾಬ್ದಾರಿಯನ್ನು ಸನ್ನಿ ಲಿಯೋನ್ ಹೊತ್ತಿದ್ದಾರೆ. ಈ ನಿಟ್ಟಿನಲ್ಲಿ ಇದುವರೆಗೆ 20 ಲಕ್ಷ ರೂ. ಆಸ್ಪತ್ರೆಗೆ ಖರ್ಚು ಮಾಡಿದ್ದಾರಂತೆ. ಒಂದು ವೇಳೆ ಕಿಡ್ನಿ ದಾನಿಗಳು ಸಿಕ್ಕರೇ, ಅದರ ಹಣವನ್ನೂ ಭರಿಸಲು ಸಿದ್ಧರಾಗಿದ್ದಾರಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಪಾಕ್ ಗಾಯಕ ಅತಿಫ್ ಅಸ್ಲಾಮ್ ವಿರುದ್ಧ ಪಾಕ್ ಜನರು ಕೋಪಗೊಂಡಿದ್ಯಾಕೆ?