ಮುಂಬೈ : ಬಾಲಿವುಡ್ ಬೆಡಗಿ ಕಂಗನಾ ಕಾರ್ಯಕ್ರಮವೊಂದರಲ್ಲಿ ಧರಿಸಿದ್ದ Gucci ನೆಕ್ಲೆಸ್ ಬೆಲೆ ಕೇಳಿದ್ರೆ ಸಾಮಾನ್ಯರು ಆಶ್ಚರ್ಯ ಪಡುವುದು ಖಂಡಿತ.
ಹೌದು. ನಟಿ ಕಂಗನಾ ಬುಧವಾರ ರಾತ್ರಿ ಇನ್ ಕನ್ವರ್ಸೇಷನ್ ವಿತ್ ಮಿಸ್ಟಿಕ್ 2018 ಕಾರ್ಯಕ್ರಮದಲ್ಲಿ ಸದ್ಗುರು ಜಗ್ಗಿ ವಾಸುದೇವ್ ಜೊತೆ ಮಾತುಕತೆ ನಡೆಸಿದ್ದಾರೆ. ಈ ಕಾರ್ಯಕ್ರಮಕ್ಕೆ ಕಂಗನಾ ಗುಲಾಬಿ ಬಣ್ಣದ ಸೀರೆಯುಟ್ಟು ಮುತ್ತಿನಿಂದ ಮಾಡಿದ್ದ ಸುಂದರ ನೆಕ್ಲೇಸ್ ವೊಂದನ್ನು ಧರಿಸಿದ್ದರು. ಅದು ಅವರ ಸೌಂದರ್ಯವನ್ನು ಇಮ್ಮಡಿಗೊಳಿಸಿತ್ತು. ಆದರೆ ಈ ನೆಕ್ಲೆಸ್ ಬೆಲೆ ಕೇಳಿದ್ರೆ ನಿಜಕ್ಕೂ ಶಾಕ್ ಆಗ್ತೀರಾ.
ಯಾಕೆಂದರೆ ಕಂಗನಾ ಧರಿಸಿದ್ದ Gucci ನೆಕ್ಲೆಸ್ ಬೆಲೆ 1,990 ಡಾಲರ್. ಅಂದ್ರೆ ಸುಮಾರು 1,36,563 ರೂಪಾಯಿ. ಇಟಾಲಿಯನ್ ಬ್ರ್ಯಾಂಡ್ ನ Gucci ಈ ಹಾರಕ್ಕೆ ಹಾಕಿದ್ದ ಮುತ್ತುಗಳು ಹಾರದ ಸೌಂದರ್ಯವನ್ನು ಹೆಚ್ಚಿಸಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ