Select Your Language

Notifications

webdunia
webdunia
webdunia
webdunia

ಬಾಲಿವುಡ್ ನತ್ತ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ

Dhruva Sarja

Krishnaveni K

ಬೆಂಗಳೂರು , ಸೋಮವಾರ, 27 ಮೇ 2024 (17:13 IST)
Photo Credit: X
ಬೆಂಗಳೂರು: ಸ್ಯಾಂಡಲ್ ವುಡ್ ನಲ್ಲಿ ಎರಡೆರಡು ಸಿನಿಮಾ ಒಟ್ಟಿಗೇ ರಿಲೀಸ್ ದಿನಾಂಕ ಘೋಷಿಸಿದ ನಟ ಧ್ರುವ ಸರ್ಜಾ ಈಗ ಮತ್ತೊಂದು ಗುಡ್ ನ್ಯೂಸ್ ಕೊಡಲು ಸಜ್ಜಾಗಿದ್ದಾರೆ.

ಧ್ರುವ ಸರ್ಜಾ ಮಾರ್ಟಿನ್ ಸಿನಿಮಾ ಅಕ್ಟೋಬರ್ ನಲ್ಲಿ ಮತ್ತು ಕೆಡಿ ಸಿನಿಮಾ ಡಿಸೆಂಬರ್ ನಲ್ಲಿ ತೆರೆಗೆ ಬರುತ್ತಿದೆ. ಈ ಎರಡೂ ಸಿನಿಮಾಗಳ ರಿಲೀಸ್ ದಿನಾಂಕವನ್ನು ಇತ್ತೀಚೆಗಷ್ಟೇ ಚಿತ್ರತಂಡದೊಂದಿಗೆ ಧ್ರುವ ಘೋಷಿಸಿದ್ದರು.

ಬಹಳ ದಿನಗಳ ನಂತರ ಸ್ಟಾರ್ ನಟರ ಸಿನಿಮಾ ಮತ್ತೆ ಸ್ಯಾಂಡಲ್ ವುಡ್ ನಲ್ಲಿ ರಿಲೀಸ್ ಆಗಲಿರುವ ಖುಷಿ ಸುದ್ದಿ ನಡುವೆಯೇ ಧ್ರುವ ಬಾಲಿವುಡ್ ಗೆ ಹಾರಲಿರುವ ಬಗ್ಗೆ ಸುದ್ದಿಯೊಂದು ಕೇಳಿಬರುತ್ತಿದೆ. ಬಾಲಿವುಡ್ ನಲ್ಲಿ ಹೃತಿಕ್ ರೋಷನ್ ಸಿನಿಮಾದಲ್ಲಿ ಧ್ರುವ ನಟಿಸಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.

ಹೃತಿಕ್ ರೋಷನ್ ಮತ್ತು ಜ್ಯೂ ಎನ್ ಟಿಆರ್ ಪ್ರಮುಖ ಪಾತ್ರದಲ್ಲಿರುವ ವಾರ್ 2 ಸಿನಿಮಾದಲ್ಲಿ ಹೃತಿಕ್ ಸಹೋದರನ ಪಾತ್ರ ಮಾಡಲು ಧ್ರುವಗೆ ಕರೆ ಬಂದಿದೆ ಎನ್ನಲಾಗಿದೆ. ಆದರ ಈ ಬಗ್ಗೆ ಧ್ರುವ ಕಡೆಯಿಂದ ಯಾವುದೇ ಮಾಹಿತಿ ಬಂದಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ವರ್ಷಾಂತ್ಯದಲ್ಲಿ ಸಿನಿಮಾ ಸುಗ್ಗಿ: ಡಿಸೆಂಬರ್‌ನಲ್ಲಿ ಡಾಲಿಯ ಉತ್ತರಕಾಂಡ ತೆರೆಗೆ ಸಾಧ್ಯತೆ