ನಟಿ ದೀಪಿಕಾ ಪಡುಕೋಣೆ ಬಾಲಿವುಡ್ ಗೆ ಎಂಟ್ರಿ ಕೊಟ್ಟ ಕೆಲವೇ ಅವಧಿಯಲ್ಲಿ ಭರ್ಜರಿ ಯಶಸ್ಸು ಕಂಡ ನಟಿ. ಅದರಲ್ಲೂ ಮೊದಲ ಸಿನಿಮಾದಲ್ಲೇ ಶಾರುಖ್ ಖಾನ್ ಅವರೊಂದಿಗೆ ಅಭಿನಯಿಸುವಂತಹ ಅವಕಾಶ ಪಡೆದ ನಟಿ ದೀಪಿಕಾ.ಆದ್ರೆ ಸಲ್ಮಾನ್ ಖಾನ್ ಅವರೊಂದಿಗೆ ದೀಪಿಕಾ ಅವರು ಇದುವರೆಗೂ ಅಭಿನಯಿಸಲೇ ಇಲ್ಲ.ಯಾಕೆ ಅನ್ನೋದಕ್ಕೆ ದೀಪಿಕಾ ಅವರೇ ಇದೀಗ ಕಾರಣ ನೀಡಿದ್ದಾರೆ.
ಎಲ್ಲಾ ಅಂದುಕೊಂಡಂತೆ ಆಗಿದ್ರೆ ಈಗಾಗಲೇ ದೀಪಿಕಾ ಹಾಗೂ ಸಲ್ಮಾನ್ ಖಾನ್ ಕಾಂಬಿನೇಷನ್ ನಲ್ಲಿ ಸಿನಿಮಾ ಬರಬೇಕಿತ್ತು.ಆದ್ರೆ ಬರೋಬ್ಬರಿ 7 ಬಾರಿ ಸಲ್ಮಾನ್ ಖಾನ್ ಅವರ ಜೊತೆ ಅಭಿನಯಿಸುವಂತಹ ಅವಕಾಶವನ್ನು ದೀಪಿಕಾ ಪಡುಕೋಣೆ ಅವರು ನಿರಾಕರಿಸಿದ್ದಾರೆ.
ಇನ್ನು ಸದ್ಯ ಸಲ್ಮಾನ್ ಖಾನ್ ಅವರು ಅಭಿನಯಿಸುತ್ತಿರುವ ಟ್ಯೂಬ್ ಲೈಟ್ ಸಿನಿಮಾದಲ್ಲೂ ಅಭಿನಯಿಸುವಂತಹ ಅವಕಾಶ ದೀಪಿಕಾ ಅವರಿಗೆ ಬಂದಿತ್ತು.ಅದನ್ನು ಕೂಡ ದೀಪಿಕಾ ನಿರಾಕರಿಸಿದ್ದರು.ಆದರೆ ಇದಕ್ಕೆಲ್ಲಾ ದೀಪಿಕಾ ಕಾರಣ ನೀಡಿದ್ದಾರೆ.
ದೀಪಿಕಾ ಅವರು ತನ್ನನ್ನು ತಾನು ಲೇಡಿ ದಬಾಂಗ್ ಅಂತಾ ಅಂದುಕೊಂಡಿದ್ದಾರಂತೆ. ಸಲ್ಮಾನ್ ಖಾನ್ ಅವರು ದಬಾಂಗ್ ಬಾಯ್ . ಹಾಗಾಗಿ ಎರಡೂ ದಬಾಂಗ್ ಗಲು ಒಂದೇ ಸಿನಿಮಾದಲ್ಲಿ ಅಭಿನಯಿಸೋದಕ್ಕೆ ಸಾಧ್ಯ ಇಲ್ಲ ಅಂತಾ ದಿಪ್ಪಿ ಸಲ್ಲು ಜೊತೆ ಅಭಿನಯಿಸೋದಕ್ಕೆ ನಿರಾಕಿಸುತ್ತಿದ್ದಾರಂತೆ. ಈಗಾಗಲೇ ದೀಪಿಕಾ ಶಾರುಖ್, ಅಮಿತಾಬ್ ಬಚ್ಚನ್, ಅಕ್ಷಯ್ ಕುಮಾರ್, ರಣ್ವೀರ ಸಿಂಗ್, ರಣ್ಬೀರ್ ಸಿಂಗ್ ಮುಂತಾದವರೊಂದಿಗೆ ಅಭಿನಯಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ