ಕನ್ನಡವೆಂದರೆ ಬಾಲಿವುಡ್ ಬೆಡಗಿ ದೀಪಿಕಾಗೆ ಇಷ್ಟೊಂದು ಅಸಡ್ಡೆಯೇ?

Webdunia
ಶುಕ್ರವಾರ, 27 ಅಕ್ಟೋಬರ್ 2017 (10:38 IST)
ಮುಂಬೈ: ಕನ್ನಡ ನಾಡಿನವಳಾಗಿದ್ದುಕೊಂಡು, ಇಲ್ಲಿಯೇ ಮೊದಲು ಬಣ್ಣ ಹಚ್ಚಿ ನಂತರ ಖ್ಯಾತಿ ಪಡೆದ ದೀಪಿಕಾ ಪಡುಕೋಣೆಗೆ ಕನ್ನಡವೆಂದರೆ ಅಷ್ಟೊಂದು ಅಸಡ್ಡೆಯೇ?

 
ಇತ್ತೀಚೆಗೆ ನಡೆದ ಸಂದರ್ಶನದಲ್ಲಿ ಆಕೆ ನೀಡಿರುವ ಹೇಳಿಕೆ ನೋಡಿದರೆ ಇದು ಸತ್ಯವೆನಿಸುತ್ತದೆ. ಈ ಸಂದರ್ಶನದಲ್ಲಿ ‘ಪದ್ಮಾವತಿ’ ಬೆಡಗಿ ತಮ್ಮ ಮೊದಲು ಚಿತ್ರ ‘ಓಂ ಶಾಂತಿ ಓಂ’ ಎಂದು ಹೇಳಿಕೊಂಡಿದ್ದಾಳೆ. ಅದಕ್ಕಿಂತ ಮೊದಲು ತಾನು ಸಿನಿಮಾ ಸೆಟ್ ನೋಡಿಯೇ ಇರಲಿಲ್ಲ ಎಂದು ಲೊಟ್ಟೆ ಬಿಟ್ಟಿದ್ದಾಳೆ.

ಅಸಲಿಗೆ, ದೀಪಿಕಾ ಮೊದಲ ಬಾರಿಗೆ ಬಣ್ಣ ಹಚ್ಚಿದ್ದು, ಕನ್ನಡದಲ್ಲಿ. ಉಪೇಂದ್ರ ಜತೆ ‘ಐಶ್ವರ್ಯಾ’ ಎಂಬ ಚಿತ್ರದಲ್ಲಿ ಅಭಿನಯಿಸಿದ್ದ ದೀಪಿಕಾ ನಂತರವಷ್ಟೇ ಓಂ ಶಾಂತಿ  ಓಂ ನಲ್ಲಿ ನಟಿಸಿದ್ದಳು. ಆದರೆ ಕನ್ನಡ ಸಿನಿಮಾವನ್ನು ಬೇಕೆಂದೇ ಬದಿಗೆ ತಳ್ಳಿದ ದೀಪಿಕಾ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಂದ ಆಕ್ರೋಶ ವ್ಯಕ್ತವಾಗಿದೆ.

ದೀಪಿಕಾ ಸುಳ್ಳುಗಾತಿ ಎಂದು ಕೆಲವರು ಜರೆದರೆ, ಇನ್ನು ಕೆಲವರು ಗೂಗಲ್ ನಲ್ಲಿ ವಿಕಿಪೀಡಿಯಾ ಎಂಬ ಸೈಟ್ ಇದೆ. ಅದು ಸುಳ್ಳು ಹೇಳಲ್ಲ ಎಂದು ಕೆಲವರು ಬೆವರಿಳಿಸಿದ್ದಾರೆ. ಜನಪ್ರಿಯತೆಗಾಗಿ ಇವರಿಗೆಲ್ಲಾ ಬಾಲಿವುಡ್ ಬೇಕು ಎಂದು ಟೀಕಿಸಿದ್ದಾರೆ. ವಿಶೇಷವೆಂದರೆ ಹೀಗೆ ಟೀಕಿಸಿದವರಲ್ಲಿ, ಕನ್ನಡಿಗರು ಮಾತ್ರವಲ್ಲ, ಬೇರೆ ಭಾಷೆಯವರೂ ಇದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮದುವೆ ಬೆನ್ನಲ್ಲೇ ಸುದ್ದಿಯಾಗುತ್ತಿದೆ ಗೌರಿಗೆ ಅಮೀರ್ ಖಾನ್ ತೊಡಿಸಿದ ಉಂಗುರ, ವಿಶೇಷತೆ ಏನ್ ಗೊತ್ತಾ

ಥಿಯೇಟರ್‌ನಲ್ಲಿ ಪೆದ್ದಿ ನೋಡಲು ಮಿಸ್ ಮಾಡಿದವರಿಗೆ ಇದೀಗ ಗುಡ್‌ನ್ಯೂಸ್

ಪ್ರಭಾಸ್ ನಟನೆಯ ಶೂಟಿಂಗ್ ಸಂದರ್ಭದಲ್ಲಿ ನಟ ರಾಜೇಶ್ ಶರ್ಮಾಗೆ ಏನಾಯ್ತು ಗೊತ್ತಾ

ನಾನು ಮಾಡಿದ ಒಂದು ಸಣ್ಣ ತಪ್ಪು ನಿಮ್ಮೆಲ್ಲರಿಗೂ ನೋವುಂಟು ಮಾಡಿತು

ಹುಟ್ಟುಹಬ್ಬ ದಿನ ಮನೆ ಹತ್ರ ಬರ್ಬೇಡಿ ಎನ್ನುವವರ ಮಧ್ಯೆ ಶಿವಣ್ಣ ತಾನೇ ಬೇರೆ ಎಂದು ತೋರಿಸಿಕೊಟ್ರು

ಮುಂದಿನ ಸುದ್ದಿ
Show comments