Publish Date: Thu, 08 Jun 2017 (11:38 IST)
Updated Date: Thu, 08 Jun 2017 (11:41 IST)
ಮುಂಬೈ: ದಂಗಲ್ ಖ್ಯಾತಿಯ ನಟಿ ಫಾತಿಮಾ ಸನಾ ಶೇಖ್ ಸ್ವಿಮ್ ಸ್ಯೂಟ್ ನಲ್ಲಿರುವ ಫೋಟೋ ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಪ್ರಕಟಿಸಿದ್ದಾರೆ. ಇದೀಗ ವೈರಲ್ ಆಗಿದೆ.
ಫಾತಿಮಾ ಹಾಟ್ ಡ್ರೆಸ್ ನೋಡಿ ಪಡ್ಡೆ ಹೈಕಳು ಖುಷಿಯಾಗಿದ್ದಾರೆ. ಆದರೆ ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಪವಿತ್ರ ರಂಜಾನ್ ತಿಂಗಳಲ್ಲಿ ಹೀಗಿರುವ ಡ್ರೆಸ್ ತೊಟ್ಟುಕೊಂಡು ಅಂಗದರ್ಶನ ಮಾಡಿದ್ದು ಮುಸ್ಲಿಂ ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಮಾಲ್ಡಿವ್ಸ್ ಬೀಚ್ ತಟದಲ್ಲಿ ಸ್ವಿಮ್ ಸ್ಯೂಟ್ ತೊಟ್ಟುಕೊಂಡ ಫಾತಿಮಾ ಹಾಟ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಬಾಕಿ ಯಾವುದೇ ಸಮಯದಲ್ಲಿ ಬೇಕಾದರೂ ಆಕೆ ಇಂತಹ ಡ್ರೆಸ್ ತೊಟ್ಟಿದ್ದರೆ ಸಮಸ್ಯೆಯಿಲ್ಲ. ಆದರೆ ಪವಿತ್ರ ರಂಜಾನ್ ತಿಂಗಳಲ್ಲಿ ಈ ರೀತಿಯ ಡ್ರೆಸ್ ತೊಡುವ ಅವಶ್ಯಕತೆ ಏನಿತ್ತು ಎನ್ನುವುದು ಸಂಪ್ರದಾಯವಾದಿಗಳ ಪ್ರಶ್ನೆ.