ಮೊನ್ನೆಯಷ್ಟೇ ಯೋಗರಾಜ್ ಭಟ್ ನಿರ್ದೇಶನದ ದನಕಾಯೋನು ಸಿನಿಮಾದ ಆಡಿಯೋ ಲಾಂಚ್ ಕಾರ್ಯಕ್ರಮ ಕನಕಪುರದಲ್ಲಿ ಅದ್ಧೂರಿಯಾಗಿ ನಡೆಯಿತು.ಆದ್ರೆ ಸಿನಿಮಾದ ನಾಯಕ ದುನಿಯಾ ವಿಜಿ ಮಾತ್ರ ಆಡಿಯೋ ರಿಲೀಸ್ ಕಾರ್ಯಕ್ರಮಕ್ಕೆ ಗೈರಾಗಿದ್ದರು. ಇದು ಗಾಂಧೀನಗರದಲ್ಲಿ ಭಾರೀ ಸುದ್ದಿ ಹಾಗೇ ಕುತೂಹಲಕ್ಕೆ ಕಾರಣವಾಗಿದೆ.
ತಮ್ಮ ಸಿನಿಮಾದ ಯಾವುದೇ ಕಾರ್ಯಕ್ರಮವಾದರೂ ಸರಿ ಅದಕ್ಕೆ ಆ ಸಿನಿಮಾದ ನಾಯಕ ನಾಯಕಿ ಬಂದೇ ಬರುತ್ತಾರೆ.ಆದ್ರೆ ದನಕಾಯೋನು ಸಿನಿಮಾದ ಆಡಿಯೋ ರಿಲೀಸ್ ಕಾರ್ಯಕ್ರಮಕ್ಕೆ ದುನಿಯಾ ವಿಜಿ ಪತ್ತೇನೇ ಇರಲಿಲ್ಲ.
ಅಂದ್ಹಾಗೆ ವಿಜಿ ಯಾವುದೋ ವೈಮನಸ್ಸಿನಿಂದ ಕಾರ್ಯಕ್ರಮಕ್ಕೆ ಗೈರಾಗಿಲ್ಲ. ಬದಲಾಗಿ ಅವರು ತಮ್ಮ ಇನ್ನೊಂದು ಚಿತ್ರದ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಮಾಸ್ತಿಗುಡಿ ಸಿನಿಮಾದ ಶೂಟಿಂಗ್ ಇದ್ದುದರಿಂದ ಅವರು ಕಾರ್ಯಕ್ರಮಕ್ಕೆ ಬರೋದಿಕ್ಕೆ ಸಾಧ್ಯವಾಗಲಿಲ್ಲವಂತೆ.
ಅಂದ್ಹಾಗೆ ಮೊನ್ನೆ ಮಾಸ್ತಿಗುಡಿ ಸಿನಿಮಾದಲ್ಲಿನ ರವಿಶಂಕರ್ ಗೌಡ ಅಭಿನಯದ ಹಲವು ದೃಶ್ಯಗಳನ್ನು ಚಿತ್ರೀಕರಿಸಿಕೊಳ್ಳಲಾಗಿದೆ. ವಿಜಯ್ ಸಹ ಇದೇ ಚಿತ್ರೀಕರಣದಲ್ಲಿದ್ದಾರೆ. ವಿಜಯ್ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ ದೃಶ್ಯಗಳನ್ನು ಶಿರಸಿ-ಸಿದ್ಧಾಪುರದ ಕಾಡುಗಳಲ್ಲಿ ಚಿತ್ರೀಕರಣ ಮಾಡುತ್ತಿದ್ದಾರಂತೆ ನಿರ್ದೇಶಕ ನಾಗಶೇಖರ್.
ಅದೇನೋ ಸರಿ ದುನಿಯಾ ವಿಜಿ ಸಿನಿಮಾದ ಶೂಟಿಂಗ್ ಅಂತಾ ಕಾರ್ಯಕ್ರಮಕ್ಕೆ ಮಿಸ್ ಆಗಿದ್ದರು.ಆದ್ರೆ ಸಿನಿಮಾದ ನಾಯಕಿ ಪ್ರಿಯಾಮಣಿ ಅವರು ಯಾಕಪ್ಪಾ ಕಾರ್ಯಕ್ರಮಕ್ಕೆ ಬರಲಿಲ್ಲ ಅನ್ನೋದು ಗಾಂಧೀನಗರದ ಮಂದಿಯ ಪ್ರಶ್ನೆ.ಅದಕ್ಕೆ ಪ್ರಿಯಾ ಮೇಡಮ್ ಅವರೇ ಉತ್ತರ ನೀಡಬೇಕಿದೆ.ಒಟ್ಟಿನಲ್ಲಿ ಈ ಕಾರ್ಯಕ್ರಮ ಹಲವು ಪ್ರಶ್ನೆಗಳನ್ನು ಹುಟ್ಟಿ ಹಾಕಿದೆ.