Select Your Language

Notifications

webdunia
webdunia
webdunia
webdunia

ತಮ್ಮ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ ನಟ ಸೂರ್ಯ

24 film
ಮುಂಬೈ , ಮಂಗಳವಾರ, 10 ಮೇ 2016 (11:22 IST)
24 ಚಿತ್ರದ ಸಕ್ಸಸ್‌ನಿಂದಾಗಿ ಸೂರ್ಯ ತಮ್ಮ ಅಭಿಮಾನಿಗಳಿಗೆ ಕೃತಜ್ಞತೆ ಹಾಗೂ ಧನ್ಯವಾದ ತಿಳಿಸಿದ್ದಾರೆ.  ಟ್ವಿಟರ್‌ನಲ್ಲಿ ಅಭಿಮಾನಿಗಳಿಗೆ ಥ್ಯಾಂಕ್ಸ್ ಎಂದಿರುವ ಅವರು,ಇದೇ  ವೇಳೆ ಚಿತ್ರ ನಿರ್ದೇಶಕ ವಿಕ್ರಮ್ ಕುಮಾರ್‌ಗೆ ಧನ್ಯವಾದ ತಿಳಿಸಿದ್ದಾರೆ. 
ಚಿತ್ರದಲ್ಲಿ ಸೂರ್ಯ ವಿಭಿನ್ನ ಪಾತ್ರದಲ್ಲಿ ಮಿಂಚಿದ್ದಾರೆ... ಪ್ರಮುಖವಾಗಿ ನಾಲ್ಕು ಮಾದರಿಯ ಪಾತ್ರಗಳಲ್ಲಿ ಮುಂಚಿರುವ ಸೂರ್ಯ ಒಂದೊಂದು ಸ್ಟೈಲ್‌ನಲ್ಲೂ ಸೂರ್ಯ ಅವರದ್ದು ವಿಭಿನ್ನ ನಟನೆ ಕಾಣಬಹುದು.. ಇನ್ನೂ ಅಭಿಮಾನಿಗಳು ಸೂರ್ಯ ಅವರ ವಿಭಿನ್ನ ಸ್ಟೈಲ್ ನೋಡಿ ಮೆಚ್ಚಿದ್ದಾರಂತೆ. ಪ್ರಶಂಸೆ ವ್ಯಕ್ತಪಡಿಸಿದ್ದಾರಂತೆ. ಈ ಹಿನ್ನೆಲೆಯಲ್ಲಿ ನಟ ಸೂರ್ಯ ತಮ್ಮ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ. 
 
ದನ್ನು ನೋಡಿದರೆ ಚಿತ್ರದಲ್ಲಿ ಹೊಸದೆನಾದರು ಸೂರ್ಯ ಚಿತ್ರ ನೋಡಿದ್ರೆ ಹೊಸತೇನಾದರೂ ಇದ್ದೇ ಇರುತ್ತೆ.. ಚಿತ್ರದಲ್ಲಿ ಸೂರ್ಯ ವಯಸ್ಸಾದ ವೃದ್ಧನ ಪಾತ್ರ, ಸೈಂಟಿಸ್ಟ್, ಲವರ್ ಬಾಯ್, ಹೀಗೆ ಹಲವು ಅವತಾರದಲ್ಲಿ ಎಂಟ್ರಿ ನೀಡಿದ್ದಾರೆ.
 
ಇನ್ನೂ ಚಿತ್ರದಲ್ಲಿ ಸೂರ್ಯನಿಗೆ ಸಮಂತ ಸಾಥ್ ನೀಡಿದ್ದಾರೆ. ಅಂಜಾನ್ ಚಿತ್ರದಲ್ಲೂ ಒಂದಾಗಿ ನಟಿಸಿದ್ದ ಈ ಜೋಡಿ ಮತ್ತೆ ಈ ಚಿತ್ರದಲ್ಲಿ ಕಾಣಿಸಿಕೊಂಡಿದೆ. ಅಲ್ಲದೇ ತೆರೆಯ ಮೇಲೆ ರೋಮ್ಯಾನ್ಸ್ ಮಾಡಲಿದ್ದಾರೆ. ಈ ಚಿತ್ರದಲ್ಲಿ ಸಮಂತ ಮುದ್ದಾಗಿ ಕಾಣಿಸಿದ್ದು, ಚಿತ್ರಕ್ಕೆ ಸಂಗೀತ ನೀಡಿದ್ದಾಕೆ ಎ.ಆರ್ ರೆಹಮಾನ್, ವಿಕ್ರಮ್ ಕೆ ಕುಮಾರ್ ಆಕ್ಷನ್ ಕಟ್ ಹೇಳಿದ್ದಾರೆ.
 
ಪ್ರತಿ ಚಿತ್ರದಲ್ಲೂ ಹೊಸ ಪರೀಕ್ಷೆಗಳನ್ನು ಮಾಡುತ್ತಾ ಅಭಿಮಾನಿಗಳ ಹೊಸ ಆಲೋಚನೆಯನ್ನು ಹುಟ್ಟುಹಾಕುವುದರಲ್ಲಿ ಮುಂಚುಣಿಯಲ್ಲಿರೋ ನಟ ಸೂರ್ಯ ತಮ್ಮ ಅಭಿಮಾನಿಗಳಿಗೆ ಥ್ಯಾಂಕ್ಸ್ ತಿಳಿಸಿರುವುದು ಗ್ರೇಟ್...

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ಮುಂಬೈಯಲ್ಲಿ ನಟಿ ಪ್ರೀತಿ ಜಿಂಟಾ ರಿಶಪ್ಶನ್ ಆಯೋಜನೆ