Publish Date: Sun, 27 Dec 2020 (10:21 IST)
Updated Date: Sun, 27 Dec 2020 (10:22 IST)
ಮುಂಬೈ: ವರುಣ್ ಧವನ್ ನಾಯಕರಾಗಿರುವ ಕೂಲಿ ನಂ.1 ಸಿನಿಮಾ ಒಟಿಟಿ ಫಾರ್ಮ್ಯಾಟ್ ನಲ್ಲಿ ಬಿಡುಗಡೆಯಾಗಿದೆ. ಆದರೆ ಈ ಸಿನಿಮಾವನ್ನು ನೆಟ್ಟಿಗರು ಇನ್ನಿಲ್ಲದಂತೆ ಟ್ರೋಲ್ ಮಾಡುತ್ತಿದ್ದಾರೆ.
ಕಾರಣ, ಇದರಲ್ಲಿರುವ ಲಾಜಿಕ್ಕೇ ಇಲ್ಲದ ದೃಶ್ಯಗಳು. ಅದರಲ್ಲೂ ಓಡುತ್ತಿರುವ ರೈಲಿನ ಮೇಲೆ ವೇಗವಾಗಿ ಓಡಿ ಹಳಿ ಮೇಲೆ ಕೂತಿರುವ ಮಗುವನ್ನು ನಾಯಕ ರಕ್ಷಿಸುವ ದೃಶ್ಯವಂತೂ ಇನ್ನಿಲ್ಲದಂತೆ ಟ್ರೋಲ್ ಆಗಿದೆ. ಸಿನಿಮಾ ತುಂಬಾ ಇಂತಹದ್ದೇ ಲಾಜಿಕ್ಕಿಲ್ಲದ ದೃಶ್ಯಗಳು, ಅಭಿನಯ ನೋಡಿ ಸಿನಿಮಾ ನಗೆಪಾಟಲಿಗೀಡಾಗುತ್ತಿದೆ.