Select Your Language

Notifications

webdunia
webdunia
webdunia
webdunia

ಕಲರ್ಸ್ ಕನ್ನಡ ವಾಹಿನಿಯಿಂದ ಹೊಸ ಚಾನೆಲ್

ಕಲರ್ಸ್ ಕನ್ನಡ ವಾಹಿನಿಯಿಂದ ಹೊಸ ಚಾನೆಲ್
ಬೆಂಗಳೂರು , ಗುರುವಾರ, 14 ಜುಲೈ 2016 (10:59 IST)
ಈಗಾಗಲೇ ತನ್ನ ವೈವಿಧ್ಯಮ ಮನೋರಂಜನಾ ಕಾರ್ಯಕ್ರಮಗಳಿಂದಾಗಿ ಕೋಟ್ಯಂತರ ಅಭಿಮಾನಿಗಳ ದಿಲ್ ಕದ್ದಿರುವ ಕಲರ್ಸ್ ಕನ್ನಡ ವಾಹಿನಿ ಇದೀಗ ತನ್ನ ವೀಕ್ಷಕರಿಗೆ ಇನ್ನಷ್ಟು ಮನೋರಂಜನೆ ನೀಡೋದಕ್ಕೆ ಮುಂದಾಗಿದೆ. ಇದೇ ತಿಂಗಳು ಕಲರ್ಸ್ ಕನ್ನಡ ವಾಹಿನಿ ಹೊಸ ವಾಹಿನಿಯೊಂದನ್ನು ಲೋಕಾರ್ಪಣೆ ಗೊಳಿಸಲಿದೆ.

ಹೌದು.. ಜುಲೈ 24ರಿಂದ ಕಲರ್ಸ್ ಕನ್ನಡ ವಾಹಿನಿಯ ಸೂಪರ್ ಕಲರ್ಸ್ ಅನ್ನೋ ಚಾನೆಲ್ ಆರಂಭವಾಗಲಿದೆ. ಕಲರ್ಸ್ ಕನ್ನಡ ವಾಹಿನಿಯಂತೆ ಇದು ಕೂಡ ಮನೋರಂಜನಾ ವಾಹಿನಿಯಾಗಿದ್ದು ಕಲರ್ಸ್ ಕನ್ನಡದಂತೆ ಇದರಲ್ಲೂ ವೈವಿಧ್ಯಮಯ ಕಾರ್ಯಕ್ರಮಗಳು ಪ್ರಸಾರವಾಗಲಿದೆ. ಈಗಾಗಲೇ ಕಲರ್ಸ್ ಕನ್ನಡ ವಾಹಿನಿಗೆ ಮುಖ್ಯಸ್ಥರಾಗಿರುವ ಪರಮೇಶ್ವರ್ ಗುಂಡ್ಕಲ್ ಅವರೇ  ಸಾರಥಿಯಾಗಲಿದ್ದಾರೆ. ಉಳಿದಂತೆ ರೆಡಿಯೋ ವೈಷ್ಣವಿ ಪ್ರೋಗ್ರಾಮ್ ಹೆಡ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ ಅಂತಾ ಹೇಳಲಾಗುತ್ತಿದೆ.

ಇನ್ನು  ಹಿಂದೆ ಝೀ ಕನ್ನಡದಲ್ಲಿದ್ದ ಸುಧನ್ವ ಫಿಕ್ಷನ್ ಹೆಡ್ ಕೆಲಸ ಪ್ರಾರಂಭಿಸಿದ್ದಾರೆ. ಇನ್ನುಳಿದಂತೆ ಖ್ಯಾತ ರಂಗಭೂಮಿ ಕಲಾವಿಜ ಶ್ರೀನಿವಾಸ್ ಜಿ . ಕಪ್ಪಣ್ಣ ಅವರ ಮಗ ಜೆಡಿ ಫಿಕ್ಷನ್ ವಿಭಾಗದ ಮುಖ್ಯಸ್ಥರಾಗಲಿದ್ದಾರಂತೆ. ಮೊನ್ನೆ  ತಾನೇ ಹೆಚ್ ಡಿ ಚಾನೆಲ್ ಆಗಿ ಕಾರ್ಯರಂಭಮಾಡಿರುವ ಕಲರ್ಸ್ ಕನ್ನಡದ ಹೊಸ ವಾಹಿನಿಯನ್ನು ಕಣ್ತುಂಬಿಕೊಳ್ಳೋದಕ್ಕೆ ಅಭಿಮಾನಿಗಳು ಕಾಯುತ್ತಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಮುಂಗಾರು ಮಳೆ-2 ಸಿನಿಮಾದಲ್ಲಿ ಶ್ರದ್ಧಾ ಶ್ರೀನಾಥ್ ಗೆ ಅತಿಥಿ ಪಾತ್ರ