Select Your Language

Notifications

webdunia
webdunia
webdunia
webdunia

ಮುಂಗಾರು ಮಳೆ-2 ಸಿನಿಮಾದಲ್ಲಿ ಶ್ರದ್ಧಾ ಶ್ರೀನಾಥ್ ಗೆ ಅತಿಥಿ ಪಾತ್ರ

ಮುಂಗಾರು ಮಳೆ-2 ಸಿನಿಮಾದಲ್ಲಿ ಶ್ರದ್ಧಾ ಶ್ರೀನಾಥ್ ಗೆ ಅತಿಥಿ ಪಾತ್ರ
ಬೆಂಗಳೂರು , ಗುರುವಾರ, 14 ಜುಲೈ 2016 (10:56 IST)
ಮೊನ್ನೆ ತಾನೇ ಶ್ರದ್ಧಾ ಶ್ರೀನಾಥ್ ಅವರು ಮಣಿರತ್ನಂ ನಿರ್ದೇಶನದ ತಮಿಳು ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಅಭಿನಯಿಸಲಿದ್ದಾರೆ ಅನ್ನೋದನ್ನು ನಾವು ಹೇಳಿದ್ದೆವು. ಆ  ಮೂಲಕ ಶ್ರದ್ಧಾ ತಮಿಳಿನಲ್ಲೂ ತಮ್ಮ ಸ್ಥಾನ ಭದ್ರಪಡಿಸುವಂತಹ ಸೂಚನೆ ನೀಡಿದ್ದರು. ಇದೀಗ ಕನ್ನಡದಲ್ಲಿ ತಯಾರಾಗುತ್ತಿರುವ ಬಹು ನಿರೀಕ್ಷಿತ ಸಿನಿಮಾ ಮುಂಗಾರು ಮಳೆ -2 ಸಿನಿಮಾದಲ್ಲಿಯೂ ಶ್ರದ್ಧಾ ಅವರು ಅಭಿನಯಿಸುವಂತಹ ಅವಕಾಶ ಪಡೆದಿದ್ದಾರೆ.

ಹೌದು...ಯೂ ಟರ್ನ್ ಸಿನಿಮಾದ ಮೂಲಕ ಕನ್ನಡ ಚಿತ್ರರಂಗದಲ್ಲಿ ಬಹು ನಿರೀಕ್ಷೆಯನ್ನು ಹುಟ್ಟು ಹಾಕಿದ ನಟಿ ಅಂದ್ರೆ ಅದು ಶ್ರದ್ಧಾ ಶ್ರೀನಾಥ್. ತನ್ನ ಮೊದಲ ಸಿನಿಮಾದಲ್ಲೇ ನಾನೊಬ್ಬ ಉತ್ತಮ ನಟಿ ಅನ್ನೋದನ್ನು ತೋರಿಸಿದ ಶ್ರದ್ಧಾಗೆ ಬಳಿಕ ಕನ್ನಡದಲ್ಲಿ ಒಂದರ ಹಿಂದೆ ಒಂದು ಅವಕಾಶಗಳು ಬರೋದಕ್ಕೆ ಆರಂಭವಾಗಿದೆ. ಸುನಿ ನಿರ್ದೇಶನದ ಅಪರೇಷನ್ ಅಲಮೇಲಮ್ಮ ಸಿನಿಮಾದಲ್ಲಿಯೂ ಶ್ರದ್ಧಾ ಅವರು ಅಭಿನಯಿಸುತ್ತಿದ್ದಾರೆ. ಇನ್ನು ಊರ್ವಿ ಸಿನಿಮಾದಲ್ಲೂ ಶ್ರದ್ಧಾ ಕಮಾಲ್ ಮಾಡೋದಕ್ಕೆ ರೆಡಿಯಾಗಿದ್ದಾರೆ. ಹೀಗಿರುವಾಗಲೇ ಶ್ರದ್ಧಾ ಅವರಿಗೆ ಮತ್ತೊಂದು ಅವಕಾಶ ಒದಗಿ ಬಂದಿದೆ. ಶಶಾಂಕ್ ನಿರ್ದೇಶನದ ಮುಂಗಾರು ಮಳೆ-2 ಸಿನಿಮಾದಲ್ಲಿಯೂ ಶ್ರದ್ಧಾ ಅವರು ಅಭಿನಯಿಸುತ್ತಿದ್ದಾರಂತೆ.

 ಹೌದು... ಅಂದ್ಹಾಗೆ ಸಿನಿಮಾದಲ್ಲಿ ಶ್ರದ್ಧಾ ಅವರದ್ದು ಅತಿಥಿ ಪಾತ್ರವಂತೆ.ಆದ್ರೆ ಯಾವ ರೀತಿಯ ಪಾತ್ರ ಅನ್ನೋದು ಸಿನಿರಸಿಕರಿಗೆ ಚಿತ್ರಮಂದಿರದಲ್ಲೇ ಗೊತ್ತಾಗಲಿದೆ ಅಂತಾ ಅವರು ಹೇಳಿದ್ದಾರೆ.ಅಲ್ಲದೇ ನಾನು ಯೂಟರ್ನ್ ಸಿನಿಮಾದಲ್ಲಿನ ಶ್ರದ್ಧಾ ಅವರ ಪಾತ್ರವನ್ನು ನೋಡಿಯೇ ಅವರಿಗೆ ನನ್ನ ಸಿನಿಮಾದಲ್ಲಿ ಅಭಿನಯಿಸೋದಕ್ಕೆ ಅವಕಾಶ ನೀಡಿದೆ.ಆಕೆ ಉತ್ತಮ ಕಲಾವಿದೆ ಅನ್ನೋದರಲ್ಲಿ ಎರಡು ಮಾತಿಲ್ಲ ಅಂತಾ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಊಟಿಯಲ್ಲಿ ರಜರಥ ಸಿನಿಮಾದ ಶೂಟಿಂಗ್