Select Your Language

Notifications

webdunia
webdunia
webdunia
webdunia

ಆಸ್ಪತ್ರೆ ಪಾಲಾದ ಹಿರಿಯ ನಟ ಧರ್ಮೇಂದ್ರ

ಆಸ್ಪತ್ರೆ ಪಾಲಾದ ಹಿರಿಯ ನಟ ಧರ್ಮೇಂದ್ರ
Mumbai , ಬುಧವಾರ, 21 ಡಿಸೆಂಬರ್ 2016 (09:54 IST)
ಆ ಕಾಲದ ಬಾಲಿವುಡ್ ಸ್ಟಾರ್ ಹೀರೋ ಅಮಿತಾಬ್ ಬಚ್ಚನ್‍ರೊಂದಿಗೆ ’ಶೋಲೆ’ ಯಂತಹ ಸೂಪರ್ ಹಿಟ್ ಚಿತ್ರದಲ್ಲಿ ನಟಿಸಿದ್ದ ಧರ್ಮೇಂದ್ರ (81) ಅನಾರೋಗ್ಯಕ್ಕೆ ಗುರಿಯಾಗಿದ್ದಾರೆ. ಜೀರ್ಣಕೋಶ (ಗ್ಯಾಸ್ಟ್ರೋಎಂಟೆರಿಟಿಸ್) ಸಮಸ್ಯೆಯಿಂದ ಅವರು ನೋವನುಭವಿಸುತ್ತಿರುವ ಅವರು ಚಿಕಿತ್ಸೆಗಾಗಿ ಮುಂಬೈನ ನಾನಾವತಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
 
ಭಾರತೀಯ ಜನತಾ ಪಕ್ಷದ ಸಂಸದೆ ಹೇಮಾಮಾಲಿನಿ ಧರ್ಮೇಂದ್ರ ಅವರ ಪತ್ನಿ. ಎಪ್ಪತ್ತರ ದಶಕದಲ್ಲಿ ಅದೆಷ್ಟೋ ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟ ಧರ್ಮೇಂದ್ರ ಮಾಸ್ ಹೀರೋ ಆಗಿ ರಂಜಿಸಿದ್ದಾರೆ. 1975ರಲ್ಲಿ ಬಂದ ’ಶೋಲೆ’ ಚಿತ್ರ ಧರ್ಮೇಂದ್ರ ವೃತ್ತಿಬದುಕಿನಲ್ಲಿ ಮರೆಯಲಾಗದ ಅಮೂಲ್ಯ ರತ್ನ ಎನ್ನಬಹುದು.
 
ಧರ್ಮೇಂದ್ರ ಆರೋಗ್ಯ ಸದ್ಯಕ್ಕೆ ಸ್ಥಿರವಾಗಿದೆಯಂದೂ, ಎರಡು ದಿನಗಳಲ್ಲಿ ಅವರು ಡಿಸ್ಚಾರ್ಜ್ ಆಗಲಿದ್ದಾರೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಡಾ. ವಿಶೇಷ್ ಅಗರ್ವಾಲ್ ತಿಳಿಸಿದ್ದಾರೆ.  ಕಳೆದ ಕೆಲವು ದಿನಗಳಿಂದ ಧರ್ಮೇಂದ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಅವರ ಪರಿಸ್ಥಿತಿ ಸ್ವಲ್ಪ ಗಂಭೀರವಾದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನುತ್ತವೆ ಮೂಲಗಳು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಡಾ.ರಾಜ್ ಪೋಷಿಸಿದ್ದ ಪಾತ್ರದಲ್ಲಿ ಡ್ಯಾನ್ಸ್ ಮಾಸ್ಟರ್ ಲಾರೆನ್ಸ್!