Select Your Language

Notifications

webdunia
webdunia
webdunia
webdunia

ಅತ್ಯಾಚಾರ ಆರೋಪಕ್ಕೊಳಗಾದ ಬಾಲಿವುಡ್ ಗಾಯಕನಿಗೆ ರಿಲೀಫ್

ಅತ್ಯಾಚಾರ ಆರೋಪಕ್ಕೊಳಗಾದ ಬಾಲಿವುಡ್ ಗಾಯಕನಿಗೆ ರಿಲೀಫ್
Mumbai , ಶುಕ್ರವಾರ, 28 ಏಪ್ರಿಲ್ 2017 (08:01 IST)
ಮುಂಬೈ: ಬಾಲಿವುಡ್ ಯುವ ಗಾಯಕ ಅಂಕಿತ್ ತಿವಾರಿ ತನ್ನನ್ನು ಮದುವೆಯಾಗುವುದಾಗಿ ನಂಬಿಸಿ ನಿರಂತರ ಅತ್ಯಾಚಾರವೆಸಗಿದ್ದಾರೆ ಎಂದು ಯುವತಿಯೊಬ್ಬಳು ನೀಡಿದ ದೂರಿನ ಮೇರೆಗೆ ವಿಚಾರಣೆ ನಡೆಸಿದ ಸೆಷನ್ಸ್ ನ್ಯಾಯಾಲಯ ಅವರನ್ನು ಆರೋಪದಿಂದ ಖುಲಾಸೆಗೊಳಿಸಿದೆ.

 
2012 ಅಕ್ಟೋಬರ್ ನಿಂದ 2013 ರ ಡಿಸೆಂಬರ್ ವರೆಗಿನ ಕಾಲಾವಧಿಯಲ್ಲಿ ಅಂಕಿತ್ ತನ್ನ ಮೇಲೆ ನಿರಂತರ ಅತ್ಯಾಚಾರವೆಸಗಿದ್ದಾರೆ ಎಂದು ಆಕೆ ಆರೋಪಿಸಿದ್ದಳು. ಈ ಸಂಬಂಧ ಸರಿಯಾದ ಸಾಕ್ಷ್ಯಾಧಾರಗಳಿಲ್ಲದ ಕಾರಣ ಪ್ರಕರಣ ಕೈಬಿಡಲಾಯಿತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿಗೆ ಬೆದರಿಕೆ ಹಾಕಿದ ಆರೋಪದಲ್ಲಿ ತಿವಾರಿ ಸಹೋದರ ಅಂಕುರ್ ಮೇಲೂ ಪ್ರಕರಣ ದಾಖಲಾಗಿತ್ತು. ಅವರನ್ನೂ ಈಗ ಆರೋಪ ಮುಕ್ತಗೊಳಿಸಲಾಗಿದೆ. ದೂರುದಾರರ ಪರ ವಕೀಲರು ಸಾಕ್ಷ್ಯ ಒದಗಿಸಲು ವಿಫಲವಾದ ಹಿನ್ನಲೆಯಲ್ಲಿ ಪ್ರಕರಣ ಖುಲಾಸೆಗೊಳಿಸಲಾಗಿದೆ ಎಂದು ಆರೋಪಿ ಪರ ವಕೀಲರು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ವಿನೋದ್ ಖನ್ನಾ ಸಾವಿಗೆ ಅಮಿತಾಭ್ ಬಚ್ಚನ್ ಗೌರವ ಸಲ್ಲಿಸಿದ ಪರಿಯಿದು