ಬಾಲಿವುಡ್‌ನ‌ ಹಿರಿಯ ಪೋಷಕ ನಟಿ ರೀಟಾ ಭಾದುರಿ ನಿಧನ

ಮಂಗಳವಾರ, 17 ಜುಲೈ 2018 (11:49 IST)
ಮುಂಬೈ : ಬಾಲಿವುಡ್‌ನ‌ ಹಿರಿಯ ಪೋಷಕ ನಟಿ ರೀಟಾ ಭಾದುರಿ ಅವರು ಮಂಗಳವಾರ ಇಹಲೋಕ ತ್ಯಜಿಸಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದ್ದು, ಈ ನೋವಿನ ವಿಚಾರವನ್ನು ನಟ ಶಿಶಿರ್‌ ಶರ್ಮಾ ಅವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.


62 ವರ್ಷ ವಯಸ್ಸಿನ ನಟಿ ರೀಟಾ ಭಾದುರಿ ಅವರು ಹಲವು ದಿನಗಳಿಂದ ಮೂತ್ರಪಿಂಡದ ಸಮಸ್ಯೆಯಿಂದ ಬಳಲುತ್ತಿದ್ದು, ಮಂಗಳವಾರ ಕೊನೆಯುಸಿರೆಳೆದಿದ್ದಾರೆ. ಇಂದು (ಜೂನ್‌ 17 ರಂದು ) ಅಂಧೇರಿ ಪೂರ್ವದ ಪಾರ್ಸಿವಾಡಾ ರಸ್ತೆಯ ಹಿಂದು ರುದ್ರಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂಬುದಾಗಿ ತಿಳಿದುಬಂದಿದೆ.


70 ರಿಂದ 90 ರ ದಶಕದಲ್ಲಿ ಹಲವು ಬಾಲಿವುಡ್‌ ಚಿತ್ರಗಳಲ್ಲಿ ರೀಟಾ ಅವರು ನಟಿಸಿದ್ದರು. ಸಾವನ್‌ ಕೋ ಆನೆ ದೋ, ರಾಜಾ, ಅವರು ನಟಿಸಿದ ಸೂಪರ್ ಹಿಟ್‌ ಚಿತ್ರಗಳು. ರಾಜಾ ನಟನೆಗಾಗಿ ಫಿಲ್ಮ್ ಫೇರ್‌ ಪ್ರಶಸ್ತಿಗೆ ಭಾಜನರಾಗಿದ್ದರು. 70 ಕ್ಕೂ ಹೆಚ್ಚು ಚಿತ್ರಗಳು ಮತ್ತು ಕಿರುತೆರೆಯಲ್ಲೂ ಬಣ್ಣ ಹಚ್ಚಿದ್ದರು. ರೀಟಾ ಅವರು ಕೊನೆಯದಾಗಿ ಅಭಿನಯಿಸಿರುವ ನಿಮ್ಕಿ ಮುಖೀಯಾ ಸದ್ಯ ಪ್ರಸಾರವಾಗುತ್ತಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ದೇಶದ ಭೀಕರ ಸಮಸ್ಯೆಯೊಂದನ್ನು ತೋರಿಸಿಕೊಟ್ಟ ನಟ ಉಪೇಂದ್ರ