Select Your Language

Notifications

webdunia
webdunia
webdunia
webdunia

ಬಾಹುಬಲಿ 2 ಟೀಸರ್ ಬಿಡುಗಡೆ ಮುಂದಕ್ಕೆ

ಬಾಹುಬಲಿ 2 ಟೀಸರ್ ಬಿಡುಗಡೆ ಮುಂದಕ್ಕೆ
Hyderabad , ಶುಕ್ರವಾರ, 20 ಜನವರಿ 2017 (14:55 IST)
ಇಡೀ ಭಾರತೀಯ ಚಿತ್ರರಂಗವೇ ಎದುರು ನೊಡುತ್ತಿರುವ ಸಿನಿಮಾಗಳಲ್ಲಿ ಬಾಹುಬಲಿ 2 ಸಹ ಒಂದು. ಇದರ ಟೀಸರ್ ಬಿಡುಗಡೆ ಮುಂದಕ್ಕೆ ಹೋಗಿದೆ. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಜ.26ಕ್ಕೆ ಬಿಡುಗಡೆಯಾಗಬೇಕಿತ್ತು. ಗ್ರಾಫಿಕ್ಸ್ ಕೆಲಸ ಇನ್ನೂ ಮುಗಿಯದೆ ಇರುವುದೇ ಮುಂಡೂಡಲು ಕಾರಣವಂತೆ.
 
ಎಸ್ ಎಸ್ ರಾಜಮೌಳಿ ಆಕ್ಷನ್ ಕಟ್ ನಲ್ಲಿ ಬರುತ್ತಿರುವ ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ. ಒಂದು ಚಿತ್ರದ ಹಣೆಬರಹ ಅದರ ಟೀಸರ್, ಟ್ರೇಲರ್‌ಗಳೇ ಹೇಳಿಬಿಡುತ್ತವೆ. ಹಾಗಾಗಿ ಸಾಕಷ್ಟು ಎಚ್ಚರಿಕೆ ತೆಗೆದುಕೊಂಡು ಟೀಸರ್ ಹೊರತರುತ್ತಿದ್ದಾರೆ ರಾಜಮೌಳಿ.
 
ಚಿತ್ರದ ಫಸ್ಟ್‌ಲುಕ್ ಬಿಡುಗಡೆ ಮಾಡಿದ್ದು ಮುಂಬೈನಲ್ಲಿ. ಅದೇ ರೀತಿ ಟೀಸರನ್ನೂ ಅಲ್ಲೇ ಬಿಡುಗಡೆ ಮಾಡಬೇಕೆಂದು ನಿರ್ಧರಿಸಿದ್ದಾರೆ ರಾಜಮೌಳಿ. ಈ ಚಿತ್ರದ ತಾರಾಬಳಗದಲ್ಲಿ ಪ್ರಭಾಸ್, ರಾಣಾ ದಗ್ಗುಬಾಟಿ, ಅನುಷ್ಕಾ ಶರ್ಮಾ, ತಮನ್ನಾ, ರಮ್ಯಾಕೃಷ್ಣ ಮುಂತಾದ ಕಲಾವಿದರಿದ್ದಾರೆ. ಏಪ್ರಿಲ್ 28, 2017ಕ್ಕೆ ಚಿತ್ರ ತೆರೆಗೆ ಬರಲಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಕ್ಯಾಲೆಂಡರ್ ಬೆಡಗಿ ಸೌಂದರ್ಯ ಅನಾವರಣ