ತುಷಾರ್ ಕಪೂರ್ ಅಪ್ಪನಾಗಿರುವುದಕ್ಕೆ ಅಭಿಷೇಕ್ ಬಚ್ಚನ್,ರಿತೇಶ್ ದೇಶಮುಖ್ ಹಾಗೂ ಕರಣ್ ಜೋಹರ್ ಶುಭಾಷಯ ತಿಳಿಸಿದ್ದಾರೆ. 39 ವರ್ಷದ ತುಷಾರ್ ನಿನ್ನೆ ಬೇಬಿ ಬಾಯ್‌ಗೆ ಅಪ್ಪನಾಗಿದ್ದರು. ಈ ಹಿನ್ನೆಲೆಯಲ್ಲಿ ತುಷಾರ್ ಕಪೂರ್‌ಗೆ ಬಾಲಿವುಡ್ ಸೆಲೆಬ್ರಿಟಿಗಳು ಶುಭಾಷಯ ತಿಳಿಸಿದ್ದಾರೆ.
ಬಾಲಿವುಡ್ ನಟ ತುಷಾರ್ ಕಪೂರ್ ಅಪ್ಪನಾಗಿರುವುದಕ್ಕೆ ಬಿಟೌನ್ ಮಂದಿ ಶುಭಾಷಯ ತಿಳಿಸುತ್ತಿದ್ದಾರೆ. ಅಲ್ಲದೇ ತುಷಾರ್ ಸಹೋದರಿ ಏಕ್ತಾ ಕಪೂರ್ ಕೂಡ ನಿನ್ನೆ ಮೈಕ್ರೋ ಬ್ಲಾಗಿಂಗ್ ಟ್ವಿಟರ್ ಮೂಲಕ ಶುಭಾಷಯ ತಿಳಿಸಿದ್ದರು. ಅಬ್ ಹಮ್ ಪಾಂಚ್ ಎಂದು ತುಷಾರ್ ಕಪೂರ್ ಬರೆದುಕೊಂಡಿದ್ದರು.
ಜೋಹರ್ ತುಷಾರ್ ಕಪೂರ್ ಅಪ್ಪನಾಗಿರುವುದಕ್ಕೆ ತುಂಬಾ ಥ್ರೀಲ್ಲ ಆಗಿದ್ದಾರೆ. ಎಲ್ಲಾ ಕಡೆಗಳಿಂದಲೂ ತುಷಾರ್‌ಗೆ ಶುಭಾಷಯಗಳು ಹರಿದು ಬರುತ್ತಿವೆ.
ಅಪ್ಪನಾಗಿರುವುದಕ್ಕೆ ನಾನು ಥ್ರೀಲ್ಲ ಆಗಿದ್ದೇನೆ. ಆದ್ದರಿಂದ ನಾನು ಲಕ್ಷ್ಯ ಹಿಂದಿರುವ ಅಕ್ಷರಗಳಿಗಾಗಿ ಥ್ರೀಲ್ ಆಗಿದ್ದು, ಇದು ನನ್ನ ಫ್ಯಾಮಿಲಿಗೆ ಸಂತೋಷದ ವಿಷಯ. ಇದಕ್ಕಾಗಿ ದೇವರಿಗೆ ಧನ್ಯವಾದ ತಿಳಿಸುತ್ತೇನೆ ಎಂದಿದ್ದರು.
ಇನ್ನೂ ಲಕ್ಷ್ಯ ಹೆಸರಿಗಾಗಿ ಶೋಭಾ ಹಾಗೂ ಜಿತೇಂದ್ರ ಕಪೂರ್ ತುಷಾರ್ ಕಪೂರ್‌ಗೆ ತುಂಬಾ ಸಂಪೋರ್ಟ್ ನೀಡಿದ್ದಾರಂತೆ. ಅಲ್ಲದೇ ತುಷಾರ್ ನಿರ್ಧಾರಕ್ಕಾಗಿ ತುಂಬಾ ಪ್ರೋತ್ಸಾಹ ನೀಡಿದ್ದಾರೆ ಎಂದು ಹೇಳಿದ್ದರು.
ಅಲ್ಲದೇ ತುಷಾರ್ ತಂದೆಯಾಗಿರುವುದಕ್ಕೆ ತುಂಬಾ ಸಂತೋಷದಲ್ಲಿದ್ದಾರೆ. ಅಲ್ಲದೇ ಮಗನ ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ಹಾಗೂ ತಂದೆಯ ಉತ್ತಮ ಸ್ಥಾನ ನಿರ್ವಹಿಸಲು ತುಂಬಾ ಎಕ್ಸೈಟ್ ಆಗಿದ್ದೇನೆ ಎಂದು ತುಷಾರ್ ತಿಳಿಸಿದ್ದರು.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ