ಮುಂಬರುವ ಚಿತ್ರ ಅಕಿರಾ ಚಿತ್ರದಲ್ಲಿ ಸೋನಾಕ್ಷಿ ಸಿನ್ಹಾ ನಟಿಸುತ್ತಿರುವುದು ಎಲ್ಲರಿಗೂ ಗೊತ್ತು. ಅಕಾರಾ ಚಿತ್ರದಲ್ಲಿ ಫಸ್ಟ್ ಪೋಸ್ಟರ್ ನಟಚಿ ಸೋನಾಕ್ಷಿ ಸಿನ್ಹಾ ಬಿಡುಗಡೆ ಮಾಡಿದ್ದಾರೆ. ಈ ಚಿತ್ರವು ಎಆರ್ ಮಪರಘದಾಸ್ ನಿರ್ದೇಶನ ಮಾಡುತ್ತಿದ್ದಾರೆ. ತಮಿಳು ಚಿತ್ರ ಮೌನಾ ಗುರು ಚಿತ್ರದ ರಿಮೇಕ್ ಚಿತ್ರ ಇದಾಗಿದೆ. ಈ ಚಿತ್ರದಲ್ಲಿ ಸೋನಾಕ್ಷಿ ಟೈಟಲ್ ರೋಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅನುರಾಗ್ ಕಶಪ್ಯ.. ಕೋಂಕಣಾ ಸೇನ್ ತಾರಾಗಣದಲ್ಲಿದ್ದಾರೆ. ಈ ಚಿತ್ರ ಸೆಪ್ಟೆಂಬರ್‌ನಲ್ಲಿ ಬಿಡುಗಡೆಯಾಗಲಿದೆ ಎನ್ನಲಾಗುತ್ತಿದ್ದು, ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟರ್ ರಿಲೀಸ್ ಮಾಡಲಾಗಿದೆ.
ದಬ್ಬಾಂಗ್ ಚೆಲುವೆ ಸೋನಾಕ್ಷಿ ಸಿನ್ಹಾ ಅವರ ಯಾವುದೇ ಸಿನಿಮಾಗಳು ಕಳೆದ ಒಂದು ವರ್ಷದಲ್ಲಿ ರಿಲೀಸ್ ಆಗಲೇ ಇಲ್ಲ.ಹಾಗಾಗಿ ಸೋನಾಕ್ಷಿ ಸಿನ್ಹಾ ಅವರನ್ನು ಮತ್ತೆ ಯಾವಾಗ ತೆರೆ ಮೇಲೆ ನೋಡ್ತೇವೋ ಅಂತಾ ಅಭಿಮಾನಿಗಳು ಕಾಯುತ್ತಲೇ ಇದ್ದಾರೆ. ಸೋನಾಕ್ಷಿ ಸಿನ್ಹಾ ಅಭಿನಯದ ಅಕಿರ ಸಿನಿಮಾ ಇದೇ ಸಪ್ಟೆಂಬರ್ ನಲ್ಲಿ ರಿಲೀಸ್ ಆಗಲಿದೆಯಂತೆ. ಸಪ್ಟಂಬರ್ 23 ರಂದು ಅಕಿರ ಸಿನಿಮಾ ರಿಲೀಸ್ ಆಗಲಿದೆ ಅಂತಾ ಸಿನಿಮಾ ತಂಡ ಹೇಳಿದೆ.ಅಂದ್ಹಾಗೆ ಅಕಿರ ಸಿನಿಮಾ ಸೋನಾಕ್ಷಿ ಪಾಲಿಗೆ ಅತ್ಯಂತ ಮಹತ್ವದ ಸಿನಿಮಾ.ಇದುವೆರಗೂ ತಾನು ನಿರ್ವಹಿಸದೇ ಇರುವಂತಹ ಪಾತ್ರವನ್ನು ಸೋನಾಕ್ಷಿ ಸಿನ್ಹಾ ಈ ಸಿನಿಮಾದಲ್ಲಿ ಮಾಡಿದ್ದಾರೆ.
ಇನ್ನು ಸಿನಿಮಾದಲ್ಲಿ ಅಭಿನಯಿಸಿದ್ದು ಕೂಡ ನಾನು ಅಚಾನಕ್ಕಾಗಿ ಅಂತಾ ಅವರು ಹೇಳಿದ್ದರು. ಹಾಗಾಗಿ ವಿಭಿನ್ನವಾದ ಪಾತ್ರದಲ್ಲಿ ಸೋನಾಕ್ಷಿ ಅವರನ್ನು ನೋಡದಕ್ಕಾಗಿ ಅಭಿಮಾನಿಗಳು ಕೂಡ ಕಾತುರದಿಂದ ಕಾಯುತ್ತಿದ್ದಾರೆ.
ಅಕಿರ ಸಿನಿಮಾವನ್ನು ಎ.ಆರ್ ಮುರುಗದಾಸ್ ಅವರು ನಿರ್ದೇಶನ ಮಾಡಿದ್ದಾರೆ.ಇನ್ನು ಸಿನಿಮಾದಲ್ಲಿ ಅಭಿನಯಿಸುತ್ತಾ ನಾನು ಸಾಕಷ್ಟು ವಿಚಾರಗಳನ್ನು ಕಲಿತಿದ್ದೇನೆ ಅಂತಾ ಸೋನಾಕ್ಷಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದರು. ಅಭಿಮಾನಿಗಳಂತೂ ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಅಂತಾ ಕಾಯುತ್ತಾ ಕುಳಿತಿದ್ದಾರಂತೆ.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ