Select Your Language

Notifications

webdunia
webdunia
webdunia
webdunia

ಕತ್ರೀನಾ ಕೈಫ್ ಅಭಿಮಾನಿಗಳಿಗೊಂದು ಸಿಹಿ ಸುದ್ದಿ

ಕತ್ರೀನಾ ಕೈಫ್ ಅಭಿಮಾನಿಗಳಿಗೊಂದು ಸಿಹಿ ಸುದ್ದಿ
ಮುಂಬೈ , ಬುಧವಾರ, 31 ಆಗಸ್ಟ್ 2016 (18:22 IST)
ಬಾಲಿವುಡ್ ನಟಿ ಕತ್ರೀನಾ ಕೈಫ್ ಬಹಳ ದಿನಗಳ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಎಂಟ್ರಿ ನೀಡಿರೋದು ನಿಮಗೆಲ್ಲರಿಗೂ ಗೊತ್ತು. ಹುಟ್ಟುಹಬ್ಬದ ದಿನದಂದು ಫೇಸ್ಬೇಕ್‌ಗೆ ಎಂಟ್ರಿ ನೀಡಿದ್ದ ಕತ್ರೀನಾ ಇನ್ಮುಂದೆ ಟ್ವಿಟರ್‌ಗೂ ಎಂಟ್ರಿ ನೀಡಲಿದ್ದಾರೆ. 

 
ಮೂಲಗಳ ಪ್ರಕಾರ, ಟ್ವಿಟರ್‌ಗೆ ಎಂಟ್ರಿ ನೀಡುವುದರ ಬಗ್ಗೆ ಕತ್ರೀನಾ ಪ್ಲ್ಯಾನನಲ್ಲಿದ್ದಾರಂತೆ. ಆದರೆ ಯಾವಾಗ ಟ್ವಿಟರ್‌ಗೆ ಬರಲಿದ್ದಾರೆ ಮಾಹಿತಿ ಇಲ್ಲ. ಇನ್ನೂ ಮುಂಬರುವ ಚಿತ್ರ ಬಾರ್ ಬಾರ್ ದೇಖೋ ಚಿತ್ರದ ರಿಲೀಸ್‌ಗಾಗಿ ಕಾಯುತ್ತಿರುವ ಕತ್ರೀನಾ ಕೈಫ್ ಸಿದ್ದಾರ್ಥ ಮಲ್ಹೋತ್ರಾ ಜತೆಗೆ ರೋಮ್ಯಾನ್ಸ್ ಮಾಡಲಿದ್ದಾರೆ.

ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳ ಜತೆಗೆ ಸದಾ ಸಂಪರ್ಕದಲ್ಲಿರಲು ಕ್ಯಾಟ್ ಫೇಸ್‌ಬುಕ್‌ಗೆ ಎಂಟ್ರಿ ನೀಡಿದ್ದರು. ಅತಿ ಶೀರ್ಘದಲ್ಲೇ ಅವರು ಟ್ವಿಟರ್‌ಗೂ ಎಂಟ್ರಿ ನೀಡಲಿದ್ದಾರಂತೆ.

 
ಕ್ಯಾಟ್ ಮುಂಬರುವ ಚಿತ್ರ 'ಬಾರ್ ಬಾರ್ ದೇಖೋ' ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಲಿದ್ದಾಳೆ. ಇನ್ನೂ ಆಕೆ ಸೋಷಿಯಲ್ ಮೀಡಿಯಾದಲ್ಲಿ ಆಕೆ ಎಂಟ್ರಿ ನೀಡುತ್ತಿರುವುದಕ್ಕೆ ಕಾರಣ ಅಂದ್ರೆ ಖಾಸಗಿ ಆಗಿ ಹಾಗೂ ವೃತ್ತಿಗಾಗಿ ಎಂಟ್ರಿ ನೀಡುತ್ತಿದ್ದಾರೆ. ಅಭಿಮಾನಿಗಳ ಜತೆಗೆ ನೇರವಾಗಿ ಸಂಪರ್ಕದಲ್ಲಿರಲು ಕ್ಯಾಟ್ ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 
 
 

 

Share this Story:

Follow Webdunia kannada

ಮುಂದಿನ ಸುದ್ದಿ

ಮೋಹನ್ ರಾಜ್ ಚಿತ್ರಕ್ಕೆ ಸಹಿ ಹಾಕಿದ ತೆಲಗು ನಟಿ ಸ್ನೇಹಾ!