ದಕ್ಷಿಣ ಭಾರತದ ನಟಿ ಸ್ನೇಹಾ ನಟ ಶಿವಕಾರ್ತಿಕೇಯೆನ್ ಹಾಗೂ ಮೋಹನ್ ರಾಜ್ ಅಭಿನಯದ ಚಿತ್ರಕ್ಕೆ ಸಹಿ ಹಾಕಿದ್ದಾರೆ ಎಂದು ತಿಳಿದು ಬಂದಿದೆ. ಮೋಹನ್ ರಾಜ್ ನಿರ್ದೇಶನದ ತನಿ ಓರವನ್ ಚಿತ್ರದ ಸ್ಪೆಷಲ್ ಪಾತ್ರದಲ್ಲಿ ನಟಿ ಸ್ನೇಹಾ ಮಿಂಚಲಿದ್ದು, ಶಿವಕಾರ್ತಿಕೇಯೆನ್ ಹಾಗೂ ನಯನತಾರಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ನಿರ್ಮಾಣ ಮಾಡುತ್ತಿದ್ದಾರೆ ಆರ್‌ಡಿ ರಾಜಾ, ಚಿತ್ರದಲ್ಲಿ ಸತೀಶ್, ಆರ್‌ಜೆ ಬಾಲಾಜಿ ತಾರಾಗಣದಲ್ಲಿದಲ್ಲಿದ್ದಾರೆ.
ನಟಿ ಸ್ನೇಹಾ ಅವರ ಪತಿ ಪ್ರಸನ್ನ ಪ್ರಥಮ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಲಿದ್ದಾರೆ. ಈ ಹಿಂದೆ ನಟ ಪ್ರಕಾಶ್ ರಾಜ್ ಜತೆಗೆ ಸ್ನೇಹಾ ದ್ವಿಭಾಷಾ ಚಿತ್ರಗಳಲ್ಲಿ ನಟಿಸಿದ್ದರು. ಅದಾದ ಬಳಿಕ ನಟಿ ಸ್ನೇಹಾ ಪತಿ ಪ್ರಸನ್ನ ಸ್ಯಾಂಡಲ್‌ವುಡ್‌ಗೆ ಎಂಟ್ರಿ ನೀಡಲಿದ್ದಾರೆ.
ಅರುಣ್ ವೈದ್ಯನಾಥನ್ ಅವರ ಕನ್ನಡ -ತಮಿಳಿನಲ್ಲಿ ಮೂಡಿ ಬರುತ್ತಿರುವ 'ವಿಸ್ಮಯ' ಚಿತ್ರದಲ್ಲಿ ಪ್ರಸನ್ನ ನಟಿಸಲಿದ್ದಾರೆ. ಇನ್ನೂ ಈ ಚಿತ್ರದಲ್ಲಿ ಅರ್ಜುನ್ ಸರ್ಜಾ ಹಾಗೂ ಶೃತಿ ಹರಿಹರನ್ ಕೂಡ ನಟಿಸಲಿದ್ದಾರೆ. ಇದೊಂದು ಆ್ಯಕ್ಷನ್ ಥ್ರೀಲ್ಲರ್‌ರ ಮೂವೀ ಅಂತ ಹೇಳಲಾಗ್ತಿದ್ದು. ಈ ಸಿನಿಮಾ ದ್ವಿಭಾಷೆಯಲ್ಲಿ ಮೂಡಿ ಬರುತ್ತಿದೆ.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ