ನಿರ್ದೇಶಕ ಇಮ್ತಿಯಾಜ್ ಅಲಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚಿತ್ರದಲ್ಲಿ ಎಸ್ಆರ್‌ಕೆ ಜತೆಗೆ ದೀಪಿಕಾ ನಟಿಸುತ್ತಾರೆ ಎಂದು ಸುದ್ದಿ ಹಬ್ಬಿತ್ತು.. ಆದ್ರೆ ದೀಪಿಕಾ ನಟಿಸುತ್ತಿಲ್ಲ, ಸದ್ಯದ ಮಾಹಿತಿ ಪ್ರಕಾರ ಅನುಷ್ಕಾ ನಟಿಸಲಿದ್ದಾಳೆ, ಈ ಚಿತ್ರದಲ್ಲಿ ಶಾರೂಖ್ ಖಾನ್ ಜತೆಗೆ ದೀಪಿಕಾ ರೋಮ್ಯಾನ್ಸ್ ಮಾಡಲಿದ್ದಾಳೆ ಎನ್ನಲಾಗ್ತಿತ್ತು.. ಆದ್ರೆ ಅನುಷ್ಕಾ ರೋಮ್ಯಾನ್ಸ್ ಮಾಡಲಿದ್ದಾಳೆ.
ತಮಾಷಾ ಸಿನಿಮಾ ಇಮ್ತಿಯಾಜ್ ಅಲಿ ಅವರಿಗೆ ಅಂದುಕೊಂಡಷ್ಟು ಯಶಸ್ಸು ತಂದುಕೊಡಲಿಲ್ಲ. ಇದೀಗ ಇಮ್ತಿಯಾಜ್ ಅಲಿ ತಮ್ಮ ಮುಂದಿನ ಸಿನಿಮಾಗೆ ಪ್ಲಾನ್ ಮಾಡುತ್ತಿದ್ದಾರೆ. ಅಂದ್ಹಾಗೆ ಈ ಬಾರಿ ಇಮ್ತಿಯಾಜ್ ಅಲಿ ತಮ್ಮ ಸಿನಿಮಾಗೆ ಶಾರುಖ್ ಖಾನ್ ಅವರನ್ನು ಹೀರೋ ಮಾಡಿದ್ದಾರೆ.
ಈಗಾಗಲೇ ಈ ಬಗ್ಗೆ ಶಾರುಖ್ ಅವರ ಜೊತೆ ಈ ಬಗ್ಗೆ ಇಮ್ತಿಯಾಜ್ ಮಾತುಕತೆ ಕೂಡ ನಡೆಸಿದ್ದಾರೆ. ಅಂದ್ಹಾಗೆ ಇಮ್ತಿಯಾಜ್ ಶಾರುಖ್ ಅವರ ಜೊತೆ ಅವರು ಸಿನಿಮಾದಲ್ಲಿ ಅಭಿನಯಿಸುವಾಗಲೇ ಈ ಸಿನಿಮಾ ಬಗ್ಗೆ ಮಾತುಕತೆ ನಡೆಸಿದ್ರಂತೆ.
ಇನ್ನು ಇಮ್ತಿಯಾಜ್ ಅಲಿ ಅವರ ಸಿನಿಮಾದಲ್ಲಿ ಈ ಹಿಂದೆ ಅಭಿನಯಿಸಲು ಶಾರುಖ್ ಅವರನ್ನು ಕೇಳಿಕೊಂಡ ಅವರು ಸಿನಿಮಾದ ಸ್ಕ್ರಿಫ್ಟ್ ಚೆನ್ನಾಗಿಲ್ಲ ಅನ್ನೋ ಕಾರಣಕ್ಕೆ ಅದನ್ನು ರಿಜೆಕ್ಟ್ ಮಾಡಿದ್ರಂತೆ.ಆದ್ರೆ ಇದೀಗ ಸ್ಕ್ರಿಫ್ಟ್ ನಲ್ಲಿ ಇಮ್ತಿಯಾಜ್ ಒಂದಷ್ಟು ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ. ಹಾಗಾಗಿ ಶಾರುಖ್ ಒಪ್ಪಿಕೊಂಡಿದ್ದಾರೆ ಅಂತಾ ಹೇಳಲ್ತಾಗಿದೆ.