Select Your Language

Notifications

webdunia
webdunia
webdunia
webdunia

ಮಿಸೆಸ್ ಕೊಹ್ಲಿ ಎಂದು ಕರೆದಿದ್ದಕ್ಕೆ ಅನುಷ್ಕಾಶರ್ಮಾ ರಿಯಾಕ್ಷನ್ ಹೇಗಿತ್ತು ಗೊತ್ತಾ?!

ಮಿಸೆಸ್ ಕೊಹ್ಲಿ ಎಂದು ಕರೆದಿದ್ದಕ್ಕೆ ಅನುಷ್ಕಾಶರ್ಮಾ ರಿಯಾಕ್ಷನ್ ಹೇಗಿತ್ತು ಗೊತ್ತಾ?!
ಮುಂಬೈ , ಭಾನುವಾರ, 26 ಮಾರ್ಚ್ 2023 (09:00 IST)
Photo Courtesy: Twitter
ಮುಂಬೈ: ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಪತ್ನಿಯೂ ಆಗಿರುವ ನಟಿ ಅನುಷ್ಕಾ ಶರ್ಮಾರನ್ನು ಕಾರ್ಯಕ್ರಮವೊಂದರಲ್ಲಿ ಮಿಸೆಸ್ ಕೊಹ್ಲಿ ಎಂದು ಕರೆದಾಗ ಅವರು ನೀಡಿದ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ?

ಕೊಹ್ಲಿ ಪತ್ನಿ ಎಂಬುದರ ಹೊರತಾಗಿ ಅನುಷ್ಕಾಗೆ ಸಿನಿಮಾರಂಗದಲ್ಲಿ ತಮ್ಮದೇ ಖ್ಯಾತಿಯಿದೆ. ಹೀಗಾಗಿ ಅವರನ್ನು ಕೊಹ್ಲಿ ಪತ್ನಿ ಎಂದು ಗುರುತಿಸುವುದಕ್ಕಿಂತ ನಟಿ ಅನುಷ್ಕಾ ಶರ್ಮಾ ಎಂದೇ ಗುರುತಿಸುತ್ತಾರೆ.

ಇದೀಗ ಕಾರ್ಯಕ್ರಮವೊಂದಕ್ಕೆ ಅತಿಥಿಯಾಗಿ ಹೋಗಿದ್ದ ಅನುಷ್ಕಾ ಫೋಟೋಗೆ ಪೋಸ್ ನೀಡುತ್ತಿದ್ದಾಗ ಪಪ್ಪಾರಾಜಿಗಳು ಮಿಸೆಸ್ ಕೊಹ್ಲಿ ಎಂದು ಕೂಗಿ ಕರೆದಿದ್ದಾರೆ. ಇದಕ್ಕೆ ನಗುತ್ತಲೇ ಪ್ರತಿಕ್ರಿಯಿಸಿರುವ ಅನುಷ್ಕಾ ‘ಕೊಂಚ ರಿಲ್ಯಾಕ್ಸ್ ಆಗಿ. ಯಾಕಿಷ್ಟು ಕಿರುಚುತ್ತೀರಾ? ನನ್ನ ಕಿವಿ ತೂತಾಗ್ತಿದೆ’ ಎಂದಿದ್ದಾರೆ.ಅನುಷ್ಕಾರ ಪ್ರತಿಕ್ರಿಯೆ ಈಗ ವೈರಲ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಟಿ ರಮ್ಯಾಗೆ ಕನ್ನಡ ಬರಲ್ವಾ? ಟಾಂಗ್ ಕೊಟ್ಟ ನೆಟ್ಟಿಗರು