ಬಿಗ್ ಬಾಸ್ ಅನುಪಮಾ ಗೌಡ ಬಾಲಿವುಡ್ ಸಿನಿಮಾ ಲುಕ್ ನೋಡಿ ಹೌಹಾರಿದ ಅಭಿಮಾನಿಗಳು!

ಮಂಗಳವಾರ, 28 ಜನವರಿ 2020 (09:54 IST)
ಬೆಂಗಳೂರು: ಕನ್ನಡ ಕಿರುತೆರೆಗಳಲ್ಲಿ ನಟಿಸಿ ಹೆಸರು ಮಾಡಿದ್ದ ನಟಿ ಅನುಪಮಾ ಗೌಡ ಬಿಗ್ ಬಾಸ್ ಮನೆಗೆ ಹೋಗಿ ಬಂದ ಮೇಲೆ ಸಿನಿಮಾಗಳಲ್ಲೂ ಉತ್ತಮ ಅವಕಾಶ ಪಡೆಯಲಾರಂಭಿಸಿದ್ದಾರೆ. ಇದೀಗ ಬಾಲಿವುಡ್ ಗೆ ಲಗ್ಗೆಯಿಡುತ್ತಿದ್ದಾರೆ.


ಅನುಪಮಾ ಗೌಡ ಬಾಲಿವುಡ್ ನಲ್ಲಿ ನಟಿಸಲಿರುವ ಸಿನಿಮಾ ‘ದಿ ಫಾಲನ್’. ಆ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ಪಕ್ಕಾ ಹಾಲಿವುಡ್ ಶೈಲಿಯ ಫಸ್ಟ್ ಲುಕ್ ನೋಡಿ ಅಭಿಮಾನಿಗಳು ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಪ್ರದೀಪ್ ವರ್ಮಾ ನಿರ್ದೇಶನದ ಈ ಸಿನಿಮಾದಲ್ಲಿ ಅನುಪಮಾ ಲೀಡಿಂಗ್ ರೋಲ್ ಮಾಡುತ್ತಿದ್ದು, ಸದ್ಯದಲ್ಲೇ ಚಿತ್ರದ ಟೀಸರ್ ಕೂಡಾ ಬಿಡುಗಡೆಯಾಗಲಿದೆ. ಐತಿಹಾಸಿಕ ಕತೆಯುಳ್ಳ ಸಿನಿಮಾ ಇದಾಗಿರುವುದರಿಂದ ಅನುಪಮಾ ಲುಕ್ ಕೂಡಾ ವಿಶೇಷವಾಗಿದೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ‘ಬೆಲ್ ಬಾಟಂ’ ಸಿನಿಮಾ ರಿಲೀಸ್ ಡೇಟ್ ಬಹಿರಂಗಗೊಳಿಸಿದ ಅಕ್ಷಯ್ ಕುಮಾರ್