‘ಬೆಲ್ ಬಾಟಂ’ ಸಿನಿಮಾ ರಿಲೀಸ್ ಡೇಟ್ ಬಹಿರಂಗಗೊಳಿಸಿದ ಅಕ್ಷಯ್ ಕುಮಾರ್

ಮಂಗಳವಾರ, 28 ಜನವರಿ 2020 (09:12 IST)
ಮುಂಬೈ:  ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ ಬೆಲ್ ಬಾಟಂ ಸಿನಿಮಾ ರಿಲೀಸ್ ಡೇಟ್ ಬಹಿರಂಗವಾಗಿದೆ. ಏಪ್ರಿಲ್ 2, 2021 ರಂದು ಸಿನಿಮಾ ತೆರೆಗೆ ಬರಲಿರುವುದಾಗಿ ಅಕ್ಷಯ್ ಘೋಷಿಸಿದ್ದಾರೆ.


ಈ ಮೊದಲು ಈ ಸಿನಿಮಾದ ಸುತ್ತ ವಿವಾದ ಸುತ್ತಿಕೊಂಡಿತ್ತು. ಕನ್ನಡದಲ್ಲಿ ರಿಷಬ್ ಶೆಟ್ಟಿ ಇದೇ ಹೆಸರಿನಲ್ಲಿ ಸಿನಿಮಾ ಮಾಡಿ ಯಶಸ್ಸು ಪಡೆದಿದ್ದರು. ಅದನ್ನು ಬಾಲಿವುಡ್ ಗೆ ರಿಮೇಕ್ ಮಾಡಲೂ ಯೋಚಿಸಿದ್ದರು. ಆದರೆ ಅದೇ ಸಮಯದಲ್ಲಿ ರಿಷಬ್ ಶೆಟ್ಟಿ ಬೆಲ್ ಬಾಟಂ ಗೆಟಪ್ ನಲ್ಲಿಯೇ ಅಕ್ಷಯ್ ಕುಮಾರ್ ಕೂಡಾ ತಮ್ಮ ಬೆಲ್ ಬಾಟಂ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿದ್ದು ನೋಡಿ ಇದು ಕನ್ನಡ ಕತೆಯನ್ನು ಒಪ್ಪಿಗೆ ಪಡೆಯದೇ ಮಾಡಲಾಗುತ್ತಿರುವ ಸಿನಿಮಾ ಎಂದು ವಿವಾದವೆದ್ದಿತ್ತು.

ಆದರೆ ಇದೀಗ ವಿವಾದಗಳು ತಣ್ಣಗಾಗಿದ್ದು, ಅಕ್ಷಯ್ ತಮ್ಮ ಸಿನಿಮಾ ರಿಲೀಸ್ ಡೇಟ್ ಬಹಿರಂಗಗೊಳಿಸಿದ್ದಾರೆ. ಇದು ಯಾವುದೇ ಸಿನಿಮಾದ ರಿಮೇಕ್ ಅಲ್ಲ ಎಂದು ಅಕ್ಷಯ್ ಇದಕ್ಕೂ ಮೊದಲೇ ಸ್ಪಷ್ಟಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕ್ಯಾಮರಾ ಹಿಡಿದು ಮತ್ತೆ ಕಾಡಿಗೆ ಹೊರಟ ನಟ ದರ್ಶನ್