ಈ ಸಿನಿಮಾಗೆ ಅಕ್ಷಯ್ ಕುಮಾರ್ ಸಂಭಾವನೆ ಕೇಳಿದರೆ ಶಾಕ್ ಆಗ್ತೀರಿ!

ಗುರುವಾರ, 23 ಜನವರಿ 2020 (08:59 IST)
ಮುಂಬೈ: ಬಾಕ್ಸ್ ಆಫೀಸ್ ಕಿಂಗ್ ಎನಿಸಿಕೊಂಡಿರುವ ಬಾಲಿವುಡ್ ನಟ ಅಕ್ಷಯ್ ಕುಮಾರ್ ಭಾರತೀಯ ಸಿನಿಮಾ ಇತಿಹಾಸದಲ್ಲೇ ಗರಿಷ್ಠ ಸಂಭಾವನೆ ಪಡೆದ ನಟ ಎನಿಸಿಕೊಳ್ಳಲಿದ್ದಾರಂತೆ!


ಆನಂದ್ ಲಿ ರೈ ನಿರ್ದೇಶನದ ಹೊಸ ಸಿನಿಮಾವೊಂದರಲ್ಲಿ ಅಕ್ಷಯ್ ನಟಿಸಲು ಒಪ್ಪಿಕೊಂಡಿದ್ದು ಈ ಸಿನಿಮಾಗೆ ಅವರು ಬರೋಬ್ಬರಿ 120 ಕೋಟಿ ರೂ. ಸಂಭಾವನೆ ಪಡೆಯಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ! ಇದು ನಿಜವೇ ಆಗಿದ್ದರೆ ಇಷ್ಟೊಂದು ದುಬಾರಿ ಸಂಭಾವನೆ ಪಡೆದ ಮೊದಲ ನಟ ಎನಿಸಿಕೊಳ್ಳಲಿದ್ದಾರೆ.

ಅಕ್ಷಯ್ ಸಿನಿಮಾಗಳು ಗಳಿಕೆಯಲ್ಲಿ 500 ಕೋಟಿ ರೂ ದಾಟುತ್ತದೆ. ಅವರ ನಾಮಬಲದಿಂದಲೇ ಸ್ಯಾಟ್ ಲೈಟ್ ಹಕ್ಕುಗಳು ದಾಖಲೆಯ ಮೊತ್ತಕ್ಕೆ ಬಿಕರಿಯಾಗುತ್ತವೆ. ಹೀಗಾಗಿ ಅಕ್ಕಿ ಇಷ್ಟು ದುಬಾರಿ ಮೊತ್ತ ಪಡೆಯುವುದರಲ್ಲಿ ತಪ್ಪಿಲ್ಲ ಎನ್ನುವುದು ಬಾಲಿವುಡ್ ಪಂಡಿತರ ಅಭಿಮತ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಕೆಜಿಎಫ್ 2 ಬಗ್ಗೆ ಹರಿದಾಡುತ್ತಿದೆ ಹೀಗೊಂದು ಸುದ್ದಿ