ಅನಾರೋಗ್ಯದ ಕಾರಣ ಖ್ಯಾತ ಮ್ಯೂಸಿಕ್ ಡೈರೆಕ್ಟರ್ ಅನು ಮಲ್ಲಿಕ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದ ವಾರವಷ್ಟೇ ಅವರು ಆಸ್ಪತ್ರೆಗೆ ದಾಖಲಾಗಿದ್ದರು.. ಮೂಲಗಳ ಪ್ರಕಾರ ಅನು ಮಲ್ಲಿಕ್ ಐಸಿಯೂನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಅವರ ಪುತ್ರಿ ಅನ್‌ಮೋಲ್ ಮಲ್ಲಿಕಾ ತಿಳಿಸಿದ್ದಾರೆ.
'ನನ್ನ ಡ್ಯಾಡಿ ಲೀಲಾವತಿ' ಆಸ್ಪತ್ರೆಯಲ್ಲಿ ಪುತ್ರಿ ತಿಳಿಸಿದ್ದಾರೆ. ಅನು ಮಲ್ಲಿಕ್ ಸರ್ಜರಿಗೆ ಒಳಪಟ್ಟಿದ್ದಾರೆ. ಇದ್ದರಿಂದ ಅನು ಮಲ್ಲಿಕೆಗೆ ಸಾಕಷ್ಟು ನೋವಾಗಿದೆಯಂತೆ. ಈ ಹಿನ್ನೆಲೆಯಲ್ಲಿ ಐಸಿಯೂನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆಯಂತೆ. ಆದ್ರೆ ಭಯಪಡುವ ಅಗತ್ಯವಿಲ್ಲ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ಕೆಲ ದಿನಗಳ ಬಳಿಕ ಅನು ಮಲ್ಲಿಕ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುತ್ತದೆ ಎಂದು ಅವರ ಪುತ್ರಿ ಹೇಳಿದ್ದಾರೆ.
ಅಲ್ಲದೇ ಈಗಾಗ್ಲೇ ಫ್ಯಾಮಿಲಿ ಆಪ್ತರು ಹಾಗೂ ಸ್ನೇಹಿತರು ಆಸ್ಪತ್ರೆಗೆ ಭೇಟಿ ಅನು ಮಲ್ಲಿಕ್ ಆರೋಗ್ಯ ವಿಚಾರಿಸಿದ್ದಾರೆ. ಆಶಾ ಭೋಸ್ಲೆ, ಮಹೇಶ್ ಭಟ್, ಹಲವು ಸಿನಿಮಾ ಇಂಡಸ್ಟ್ರಿಯ ಮಂದಿ ಭೇಟಿ ನೀಡಿದ್ದಾರಂತೆ.
ಇಂಡಿಯನ್ ಐಡಲ್ ಶೋ ಮೂಲಕ ಜಡ್ಜ್ ಆಗಿ ಕಾಣಿಸಿಕೊಂಡಿದ್ದ ಅನು ಮಲ್ಲಿಕ್. 1977ರಲ್ಲಿ ಮ್ಯೂಸಿಕ್ ಕಂಪೋಸ್ ಮಾಡುವ ಮೂಲಕ ಎಂಟ್ರಿ ನೀಡಿದ್ದರು.. ಇದುವರೆಗೂ 350 ಚಿತ್ರಗಳಿಗೆ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.