ಹಣಕ್ಕಾಗಿ ಕಸ ಗುಡಿಸುವ ಕೆಲಸಕ್ಕೂ ತಯಾರಾಗಿದ್ದರಂತೆ ಬಿಗ್ ಬಿ ಅಮಿತಾಭ್ ಬಚ್ಚನ್!

ಶುಕ್ರವಾರ, 27 ಸೆಪ್ಟಂಬರ್ 2019 (09:37 IST)
ಮುಂಬೈ: ಇತ್ತೀಚೆಗಷ್ಟೇ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತರಾಗಿರುವ ಬಿಗ್ ಬಿ ಅಮಿತಾಭ್ ಬಚ್ಚನ್ ಒಂದು ಕಾಲದಲ್ಲಿ ಸಿನಿಮಾದಲ್ಲಿ ಸೋತು ಹಣ ಕಳೆದುಕೊಂಡು ಸಂಕಷ್ಟದಲ್ಲಿದ್ದರು. ಆ ದಿನಗಳನ್ನು ಅವರು ಸಂದರ್ಶನವೊಂದರಲ್ಲಿ ಸ್ಮರಿಸಿಕೊಂಡಿದ್ದಾರೆ.


ಹಣ ಕಳೆದುಕೊಂಡು, ಮನೆಯನ್ನೂ ಕಳೆದುಕೊಂಡು ಸಾಲಗಾರರಿಗೆ ಹಣ ತೀರಿಸಲಾಗದೇ ಅಮಿತಾಭ್ ದಿಕ್ಕು ತೋಚದಂತಾಗಿದ್ದರು. ಈ ಸಂದರ್ಭದಲ್ಲಿ ಅವರಿಗೆ ಕೌನ್ ಬನೇಗಾ ಕರೋಡ್‍ ಪತಿ ಆಫರ್ ಬಂತಂತೆ. ಆದರೆ ಅವರ ಪತ್ನಿ ಜಯಾ ಬಚ್ಚನ್ ಮತ್ತು ಮಕ್ಕಳು ಇದಕ್ಕೆ ಬಿಲುಕುಲ್ ಒಪ್ಪಲಿಲ್ಲವಂತೆ.

‘ಟಿವಿ ಕಾರ್ಯಕ್ರಮದಲ್ಲಿ ಭಾಗವಹಿಸುವುದು ನಿಮ್ಮ ಇಮೇಜ್ ಕಮ್ಮಿ ಮಾಡುತ್ತದೆ. ಟಿವಿ ಮಾಧ್ಯಮ ಚಿಕ್ಕದು’ ಎಂದು ಜಯಾ ಹೇಳಿದ್ದರಂತೆ. ಆದರೆ ಆಗ ತಾನು ಎಂತಹ ಪರಿಸ್ಥಿತಿಯಲ್ಲಿ ಇದ್ದೆನೆಂದರೆ ಹಣ ಗಳಿಕೆ ಮಾಡಬಹುದೆಂದರೆ ಕಸ ಗುಡಿಸು ಎಂದರೂ ಸಿದ್ಧವಿದ್ದೆ ಎಂದು ಅಮಿತಾಭ್ ಸಂದರ್ಶನವೊಂದರಲ್ಲಿ ಬಹಿರಂಗಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಮುಂದಿನ ಸುದ್ದಿ ಗೀತಾ ಸಿನಿಮಾಗೆ ಪವರ್ ಸ್ಟಾರ್ ಪುನೀತ್ ಪ್ರಚಾರ