Publish Date: Sun, 09 Oct 2022 (09:10 IST)
Updated Date: Sun, 09 Oct 2022 (09:16 IST)
ಮುಂಬೈ: ನಟ ಅಮಿತಾಭ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮಕ್ಕೆ ಜಯಾ ಬಚ್ಚನ್ ಎಂಟ್ರಿ ಕೊಟ್ಟಿದ್ದಾರೆ.
ಪುತ್ರ ಅಭಿಷೇಕ್ ಬಚ್ಚನ್ ಜೊತೆ ಜಯಾ ಬಚ್ಚನ್ ಕೂಡಾ ಸರ್ಪೈಸ್ ಆಗಿ ಎಂಟ್ರಿ ಕೊಟ್ಟು ಹಾಟ್ ಸೀಟ್ ನಲ್ಲಿ ಕೂತಿದ್ದರು. ಪತ್ನಿ ಆಗಮನ ಅಮಿತಾಭ್ ಗೆ ನಿಜಕ್ಕೂ ಖುಷಿ ತಂದಿತ್ತು.
ಆದರೆ ಹಾಟ್ ಸೀಟ್ ನಲ್ಲಿ ಅಮಿತಾಭ್ ಜೀವನದ ಘಟನೆಯೊಂದನ್ನು ಜಯಾ ಬಹಿರಂಗಪಡಿಸಿದ್ದು, ಈ ವೇಳೆ ಅಮಿತಾಭ್ ಕಣ್ಣೀರು ಹಾಕಿದ್ದಾರೆ. ಅಷ್ಟಕ್ಕೂ ಜಯಾ ಹೇಳಿದ ಆ ವಿಚಾರವೇನೆಂದು ತಿಳಿಯಲು ಅಕ್ಟೋಬರ್ 11 ರ ಎಪಿಸೋಡ್ ನೋಡಬೇಕು.
-Edited by Rajesh Patil