ಕಳೆದ ಒಂದು ವರ್ಷದಲ್ಲಿ 100 ಕೋಟಿ ಆಸ್ತಿ ಖರೀದಿ ಮಾಡಿದ ಅಮಿತಾಭ್ ಬಚ್ಚನ್

Krishnaveni K
ಶುಕ್ರವಾರ, 28 ಜೂನ್ 2024 (11:39 IST)
ಮುಂಬೈ: ಕಳೆದ ಒಂದು ವರ್ಷದಲ್ಲಿ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ 100 ಕೋಟಿ ರೂ. ಮೌಲ್ಯದ ಆಸ್ತಿ ಖರೀದಿ ಮಾಡಿದ್ದಾರಂತೆ.

81 ವರ್ಷದ ನಟ ಈ ಇಳಿಯವಯಸ್ಸಿನಲ್ಲೂ ಸಿನಿಮಾಗಳಲ್ಲಿ ಸಕ್ರಿಯರಾಗಿದ್ದಾರೆ. ಈಗಷ್ಟೇ ಅಮಿತಾಭ್ ಅಭಿನಯದ ಕಲ್ಕಿ 2898 ಎಡಿ ಸಿನಿಮಾ ಬಿಡುಗಡೆಯಾಗಿ ಭರ್ಜರಿ ರೆಸ್ಪಾನ್ ಗಿಟ್ಟಿಸಿಕೊಳ್ಳುತ್ತಿದೆ. ಅದರಲ್ಲೂ ಅಮಿತಾಭ್ ಅಭಿನಯಕ್ಕಂತೂ ಪ್ರೇಕ್ಷಕರು ಫುಲ್ ಮಾರ್ಕ್ಸ್ ಕೊಟ್ಟಿದ್ದಾರೆ.

ಒಂದಾದ ಮೇಲೊಂದರಂತೆ ಸಿನಿಮಾದಲ್ಲಿ ನಟಿಸುವ ಅಮಿತಾಭ್ ಕೋಟಿಗಟ್ಟಲೆ ಸಂಭಾವನೆ ಜೇಬಿಗಿಳಿಸಿಕೊಳ್ಳುತ್ತಿದ್ದಾರೆ. ಕಳೆದ ಒಂದು ವರ್ಷದಲ್ಲಿ ಮೂರು ಪ್ರಮುಖ ಆಸ್ತಿ ಖರೀದಿ ಮಾಡಿದ್ದಾರೆ. ಆ ಪೈಕಿ ಆಲಿಭಾಗ್ ನಲ್ಲಿ ಒಂದು ನಿವೇಶನ, ಅಯೋಧ್ಯೆಯಲ್ಲಿ ನಿವೇಶನ ಮತ್ತು ಮುಂಬೈನಲ್ಲಿ ಕಚೇರಿ ಮಾಡಬಹುದಾದ ಕಟ್ಟಡ ಖರೀದಿ ಮಾಡಿದ್ದಾರೆ.

ಇತ್ತೀಚೆಗಷ್ಟೇ ಅಮಿತಾಭ್ ಮುಂಬೈನ ಅಂಧೇರಿಯಲ್ಲಿ 60 ಕೋಟಿ ರೂ. ಮೌಲ್ಯದ ಮೂರು ಆಫೀಸ್ ಯೂನಿಟ್ ಗಳನ್ನು ಖರೀದಿ ಮಾಡಿದ್ದಾರೆ. ಈ ಮೂಲಕ ಸಿನಿಮಾ ಮೂಲಕ ಸಂಪಾದಿಸಿದ ಹಣವನ್ನು ಆಸ್ತಿಗಳಲ್ಲಿ ಹೂಡಿಕೆ ಮಾಡುವ ಮೂಲಕ ಅಮಿತಾಭ್ ತಮ್ಮ ಆಸ್ತಿ ಮೌಲ್ಯ ಹೆಚ್ಚಿಸಿಕೊಳ್ಳುತ್ತಲೇ ಇದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ರೇಣುಕಾಸ್ವಾಮಿ ಸಮಾಧಿ ಧ್ವಂಸ, ಫೋಷಕರು ಏನ್ ಹೇಳ್ತಾರೆ ಗೊತ್ತಾ

ನಾಳೆ ಡೆವಿಲ್ ತೆರೆಗೆ, ಜೈಲಿನಲ್ಲಿದ್ರೂ ದರ್ಶನ್ ಕೈಬಿಡದ ಕನ್ನಡ ತಾರೆಯರು ಇವರೇ

IMDb 2025 ರ ಅತ್ಯಂತ ಜನಪ್ರಿಯ ಭಾರತೀಯ ಚಲನಚಿತ್ರಗಳು ಪ್ರಕಟ

ನಿನ್ನ ವ್ಯಕ್ತಿತ್ವಕ್ಕೆ ನಾನೇ ನಿನ್ನ ದೊಡ್ಡ ಚಿಯರ್‌ಲೀಡರ್‌: ರುಕ್ಮಿಣಿ ವಸಂತ್‌ಗೆ ಚೈತ್ರಾ ಪ್ರೀತಿಯ ವಿಶ್‌

ಶಿರಡಿ ಸಾಯಿಬಾಬಾಗೆ ಕೊಡುಗೆ ನೀಡಿ, ಕಾರಣ ಬಿಚ್ಚಿಟ್ಟ ಕನಸಿನ ರಾಣಿ ಮಾಲಾಶ್ರೀ

ಮುಂದಿನ ಸುದ್ದಿ
Show comments