Publish Date: Fri, 21 Oct 2016 (10:01 IST)
Updated Date: Fri, 21 Oct 2016 (10:23 IST)
ಮುಂಬೈ: ಸದಾ ವಿಭಿನ್ನ ಸಿನಿಮಾ ಮಾಡುವ ಮೂಲಕ ಪ್ರೇಕ್ಷಕರ ಸೆಳೆಯುವ ಅಮೀರ್ ಖಾನ್ ನ ಹೊಸ ಚಿತ್ರ “ದಂಗಲ್”ನ ಟ್ರೇಲರ್ ಬಿಡುಗಡೆಯಾಗಿದೆ. ಬಾಲಿವುಡ್ ಮಂದಿ ಇದಕ್ಕೆ ಫಿದಾ ಆಗಿದ್ದೂ ಆಗಿದೆ.
ಅಮೀರ್ ಖಾನ್ ಇದರಲ್ಲಿ ಮಹಾವೀರ್ ಸಿಂಗ್ ಫೋಗಟ್ ಎಂಬ ಇಬ್ಬರು ಹೆಣ್ಣು ಮಕ್ಕಳ ತಂದೆಯ ಪಾತ್ರ ಮಾಡುತ್ತಿದ್ದಾರೆ. ಮಕ್ಕಳು ಮಹಾನ್ ಕುಸ್ತಿಪಟುಗಳಾಗಬೇಕೆಂದು ಬಯಸುವ ತಂದೆ ತನ್ನಿಬ್ಬರು ಹೆಣ್ಣು ಮಕ್ಕಳಿಗೆ ಕುಸ್ತಿ ಕಲಿಸುವ ದೃಶ್ಯಗಳು ಟ್ರೇಲರ್ ನಲ್ಲಿದೆ.
ಹಿರಿಯ ನಟ ಅನುಪಮ್ ಖೇರ್, ಶಬಾನಾ ಅಜ್ಮಿ, ನೇಹಾ ದುಪಿಯಾ ಮೊದಲಾದವರು ಟ್ವಿಟರ್ ನಲ್ಲಿ ಅಮೀರ್ ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಭಾರತದ ಮಹಿಳಾ ಕುಸ್ತಿ ತಂಡದ ಕೋಚ್ ಕೃಪಾ ಶಂಕರ್ ಬಿಶೋನಿ ಕುಸ್ತಿ ದೃಶ್ಯಗಳಿಗೆ ತರಬೇತು ನೀಡಿರುವುದು ವಿಶೇಷ. ನಿತೀಶ್ ತಿವಾರಿ ಚಿತ್ರದ ನಿರ್ದೇಶಕರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ