ಬಾಲಿವುಡ್ ನಟಿ ಆಲಿಯಾ ಭಟ್ ಹಾಗೂ ಕತ್ರೀನಾ ಕೈಫ್ ಸಿಸ್ಟರ್ಸ್ ಎಂದು ಅನ್ನಿಸುತ್ತದೆ. ಅವರು ಸಹೋದರಿಯರು ಆಗಿದ್ರೆ ಚೆನ್ನಾಗಿರುತಿತ್ತು ಎಂದು ನಟಿ ಹಾಗೂ ನಿರ್ಮಾಪಕಿ ಪೂಜಾ ಭಟ್ ತಿಳಿಸಿದ್ದಾರೆ. 44 ವರ್ಷದ ಪೂಜಾ ಪೂಜಾ ಭಟ್ ಈ ಕುರಿತು ಪಿಕ್ಚರ್ ಶೇರ್ ಮಾಡಿದ್ದಾರೆ. ಅಲಿಯಾ ಭಟ್ ಅವರ ಉಡ್ತಾ ಪಂಜಾಬ್ ಚಿತ್ರದ ಕೆಲ ಫೊಟೋಗಳನ್ನು ಶೇರ್ ಮಾಡಿದ್ದಾರೆ.
ಇನ್ನೂ ಉಡ್ತಾ ಪಂಜಾಬ್ ಚಿತ್ರ ಕಳೆದ ಶುಕ್ರವಾರದಂದು ಬಿಡುಗಡೆಯಾಗಿತ್ತು. ಮುಕೇಶ್ ಭಟ್ ಸೇರಿದಂತೆ ಭಟ್ ಫ್ಯಾಮಿಲಿ ಎಲ್ಲಾ ಗಣ್ಯರು ಚಿತ್ರ ವೀಕ್ಷಿಸಿದ್ದಾರೆ.
ಒಂದಾದ ಮೇಲೆ ಒಂದು ವಿವಾದಗಳಿಗೆ ತುತ್ತಾಗುತ್ತಲೇ ಬಂದ ಉಡ್ತಾ ಪಂಜಾಬ್ ಚಿತ್ರ ಕಡೆಗೂ ತೆರೆ ಕಂಡಿದೆಯಾದರೂ ನಿರೀಕ್ಷಿತ ಮಟ್ಟದಲ್ಲಿಸುದ್ದಿ ಮಾಡುವಲ್ಲಿ ವಿಫಲವಾಗಿದೆ ಎಂದು ಕೆಲವರು ಆಡಿಕೊಳ್ಳುತ್ತಿದ್ದಾರೆ. ಆದ್ರೆ ಪ್ರೇಕ್ಷಕರು ಚಿತ್ರದ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ.
ಪಂಜಾಬ್ನ ಡ್ರಗ್ಸ್ ಮಾಫಿಯಾ ಚಿತ್ರಣವನ್ನೇ ಹೆಣೆದು ಕತೆಯಾಗಿಸಿಕೊಂಡ ‘ಉಡ್ತಾ ಪಂಜಾಬ್’ ಮೊದಲ ದಿನದ ಪ್ರದರ್ಶನದಲ್ಲಿ ಹೇಳಿಕೊಳ್ಳುವಷ್ಟು ಪ್ರೇಕ್ಷಕರನ್ನು ಥಿಯೇಟರ್ಗೆ ಕರೆತರುವಲ್ಲಿ ವಿಫಲವಾಗಿರುವುದು ಸಹಜವಾಗಿಯೇ ಚಿತ್ರದ ವಿತರಕರಲ್ಲಿ ನಿರಾಶೆ ಮೂಡಿಸಿದೆ. ಆದರೆ ಸಮಾಧಾನಪಟ್ಟುಕೊಳ್ಳಬೇಕಾದ ಅಂಶವೇನೆಂದರೆ ದೇಶದ ಬಹುತೇಕ ಮಲ್ಟಿಫ್ಲೆಕ್ಸ್ಗಳಲ್ಲಿ ಉತ್ತಮ ಪ್ರದರ್ಶನ ಕಂಡಿದೆ.
ಪಂಜಾಬ್ ಡ್ರಗ್ಸ್ ಮಾಫಿಯಾ ಚಿತ್ರಣವನ್ನು ಹೆಣೆದು ಕಥೆಯಾಗಿಸಿರುವ ಚಿತ್ರ ಮೊದಲ ದಿನದಲ್ಲೇ ಹೇಳಿಕೊಳ್ಳುವಷ್ಟು ಪ್ರೇಕ್ಷಕರನ್ನು ಮನ ಮುಟ್ಟುವಲ್ಲಿ ವಿಫಲವಾಯ್ತು. ಸಹಜವಾಗಿಯೇ ಚಿತ್ರದ ವಿತರಕರಲ್ಲಿ ನಿರಾಶೆ ಮೂಡಿಸಿದೆ. ಆದರೆ ಸಮಾಧಾನ ತರುವ ವಿಷ್ಯವೆಂದರೆ ದೇಶದ ಮಲ್ಟಿಪ್ಲೆಕ್ಸ್‌ಗಳಲ್ಲಿ ಉತ್ತಮ ಪ್ರದರ್ಶನ ಕಂಡಿದೆ.ಮೊದಲ ದಿನದಲ್ಲೇ ಚಿತ್ರ 8 ರಿಂದ 9 ಕೋಟಿ ಸಂಪಾದನೆ ಮಾಡಿದೆ.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ