ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಗಳ ಜೆತೆಗೆ ಸಾಥ್ ನೀಡಲು ಬರುತ್ತಿದ್ದಾರೆ. ಇದೀಗ ಆ್ಯಕ್ಷನ್ ಹಿರೋ ಅಕ್ಷಯ್ ಕುಮಾರ್ ಮುಂಬರುವ ಬಹುನಿರೀಕ್ಷಿತ ಸಿನಿಮಾ ಕಬಾಲಿ ಚಿತ್ರದ ರಿಲೀಸ್ ದಿನಕ್ಕಾಗಿ ಕಾಯುತ್ತಿದ್ದಾರೆ. ಸದ್ಯ ನಟ ಅಕ್ಷಯ್ ಚೆನ್ನೈನಲ್ಲಿದ್ದಾರೆ. ತಮ್ಮ ಮುಂಬರುವ ಚಿತ್ರ 2.0 ಚಿತ್ರೀಕರಣದಲ್ಲಿ ಬ್ಯೂಸಿ ಇರುವ ಅಕ್ಕಿಗೆ, ರಜನಿಕಾಂತ್ ಅಭಿನಯದ ಕಬಾಲಿ ಚಿತ್ರ ಫಸ್ಟ್ ಶೋ ಚೆನ್ನೈನಲ್ಲಿ ತೆರೆ ಕಾಣಲಿದೆ. ಈ ಹಿನ್ನೆಲೆಯಲ್ಲಿ ತಮಿಳು ಅಭಿಮಾನಿಗಳ ಕುರಿತು ಅಕ್ಕಿ ಮಾತನಾಡಿದ್ದಾರೆ.
ಅಕ್ಕಿ ಅಭಿನಯದ 2.0 ಚಿತ್ರದ ಕೋ-ಸ್ಟಾರ್ ಆಗಿರುವ ರಜನಿಕಾಂತ್ ಅವರ ಮುಂಬರುವ ಕಬಾಲಿ ಚಿತ್ರವನ್ನು ವೀಕ್ಷಿಸುವ ನಿರೀಕ್ಷೆಯಲ್ಲಿ ಇದ್ದಾರಂತೆ ಅಕ್ಕಿ.
ಕಬಾಲಿ ಚಿತ್ರದ ಕುರಿತು ಉತ್ಸುಕನಾಗಿರುವ ನಾನು, ತಲೈವಾ ಬಗ್ಗೆ ತಮಿಳುನಾಡಿನ ಜನರು ಅಪಾರ ಗೌರವ ಹೊಂದಿದ್ದಾರೆ. ಕಬಾಲಿ ಚಿತ್ರದ ದಿನ ಬರುವಂತೆ ಹಲವು ಜನರು ಕೋರಿದ್ದಾರೆ. ಆದ್ದರಿಂದ ನಾನು ಚೈನ್ನೈನಲ್ಲಿ ಬಿಡುಗಡೆಗೊಳ್ಳಲಿರುವ ಕಬಾಲಿ ಚಿತ್ರದಲ್ಲಿ ಪಾಲ್ಗೊಳ್ಳಲಿದ್ದೇನೆ ಎಂದು ಅಕ್ಕಿ ತಿಳಿಸಿದ್ದಾರೆ.
ಅಲ್ಲದೇ 2ಯ0 ಸೆಟ್ ನಲ್ಲಿ ನಾನು ಕಬಾಲಿ ಚಿತ್ರದ ರಿಂಗ್‌ಟೂನ್ ಆಲಿಸಿದ್ದೇನೆ. ಎಲ್ಲಾ ಕಡೆಗಳಲ್ಲಿ ಕಬಾಲಿ ಸಖತ್ ಹವಾ ಕ್ರಿಯೇಟ್ ಮಾಡಿದ್ದು, ಇದೊಂದು ನಂಬಲು ಅಸಾಧ್ಯವಾದದ್ದು, 'ಕಬಾಲಿ' ಚಿತ್ರದ ರಿಲೀಸ್ ದಿನಕ್ಕಾಗಿ ಶುಭಾಷಯ ಕೋರಲಿದ್ದೇನೆ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ