Select Your Language

Notifications

webdunia
webdunia
webdunia
webdunia

ಬಾಲಿವುಡ್ ನ ಒಳ್ಳೆ ಹುಡುಗ ಅಕ್ಷಯ್ ಕುಮಾರ್! ಕಾರಣ ಅಂತಿಂಥದ್ದಲ್ಲ!

ಬಾಲಿವುಡ್ ನ ಒಳ್ಳೆ ಹುಡುಗ ಅಕ್ಷಯ್ ಕುಮಾರ್! ಕಾರಣ ಅಂತಿಂಥದ್ದಲ್ಲ!
Mumbai , ಸೋಮವಾರ, 10 ಏಪ್ರಿಲ್ 2017 (08:09 IST)
ಮುಂಬೈ: ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಎಲ್ಲರಂತಲ್ಲ ಎಂದು ಆಗಾಗ ಪ್ರೂವ್ ಮಾಡುತ್ತಲೇ ಇರುತ್ತಾರೆ. ಅವರು ಮಾಡುವ ಕೆಲವು ಒಳ್ಳೊಳ್ಳೆ ಕೆಲಸಗಳಿಗೆ ಮೆಚ್ಚುಗೆ ವ್ಯಕ್ತಪಡಿಸಲೇಬೇಕು. ಈಗ ಅಂತಹದ್ದೊಂದು ಸಂದರ್ಭ ಬಂದಿದೆ.

 

ಮೊನ್ನೆಯಷ್ಟೇ ದೇಶಭಕ್ತಿ ಆಧಾರಿತ ರುಸ್ತುಂ ಚಿತ್ರಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದಿದ್ದ ಅಕ್ಷಯ್ ಕುಮಾರ್, ಇದೀಗ ದೇಶವೇ ಮೆಚ್ಚುವಂತಹ ಕೆಲಸ ಮಾಡಿದ್ದಾರೆ. ವೀರ ಯೋಧರಿಗಾಗಿ ಸಿನಿಮಾದಲ್ಲಿ ಉದ್ದುದ್ದ ಡೈಲಾಗ್ ಹೊಡೆದು ಅದನ್ನು ಅಷ್ಟಕ್ಕೇ ಸೀಮಿತಗೊಳಿಸಿಲ್ಲ.

 
ಯೋಧರ ನೆರವಿಗಾಗಿ ‘ಭಾರತ್ ಕೆ ವೀರ್’ ಎನ್ನುವ ಆಪ್ ಹುಟ್ಟು ಹಾಕಿದ್ದಾರೆ. ಈ ದೇಶಕ್ಕಾಗಿ ಪ್ರಾಣ ತೆತ್ತ ಯೋಧರ ಕುಟುಂಬಗಳಿಗೆ ನೆರವಾಗಲು ಬಯಸುವವರು ಈ ಆಪ್ ಮೂಲಕ ತಮ್ಮ ಕೈಲಾದ ಧನ ಸಹಾಯ ಮಾಡಬಹುದು.

 
ಕೇಂದ್ರ ಗೃಹ ಸಚಿವರ ರಾಜನಾಥ್ ಸಿಂಗ್ ಅಕ್ಷಯ್ ನಡೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು ನಟನ ಕೆಲಸಕ್ಕೆ ಕೇಂದ್ರವೂ ಕೈ ಜೋಡಿಸಲಿದೆ. ಈ ವಿಶೇಷ ಆಪ್ ಗೆ ದೇಶದ 1.25 ಕೋಟಿ ಜನ ಬೆಂಬಲ ನೀಡುತ್ತಾರೆ ಎಂಬ ವಿಶ್ವಾಸದಲ್ಲಿ ಅಕ್ಷಯ್ ಇದ್ದಾರೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಬಾಲಿವುಡ್ ನಟ ಅರ್ಜುನ್ ರಾಂಪಾಲ್ ವಿರುದ್ಧ ಎಫ್`ಐಆರ್ ದಾಖಲು