Select Your Language

Notifications

webdunia
webdunia
webdunia
webdunia

ಬಾಲಿವುಡ್ ನಟ ಅರ್ಜುನ್ ರಾಂಪಾಲ್ ವಿರುದ್ಧ ಎಫ್`ಐಆರ್ ದಾಖಲು

ಬಾಲಿವುಡ್ ನಟ ಅರ್ಜುನ್ ರಾಂಪಾಲ್ ವಿರುದ್ಧ ಎಫ್`ಐಆರ್ ದಾಖಲು
ನವದೆಹಲಿ , ಭಾನುವಾರ, 9 ಏಪ್ರಿಲ್ 2017 (13:05 IST)
ಕ್ಯಾಮೆರಾ ಎಸೆದು ಗಾಯಗೊಳಿಸಿದ ಅರ್ಜುನ್ ರಾಂಪಾಲ್ ವಿರುದ್ಧ ದೂರು ನೈಟ್ ಕ್ಲಬ್`ವೊಂದರಲ್ಲಿ ಕ್ಯಾಮೆರಾ ಎಸೆದು ವ್ಯಕ್ತಿಗೆ ಗಾಯ ಮಾಡಿದ ಆರೋಪದಡಿಬಾಲಿವುಡ್ ನಟ ಅರ್ಜುನ್ ರಾಂಪಾಲ್ ವಿರುದ್ಧ ದೆಹಲಿಯಲ್ಲಿ ದೂರು ದಾಖಲಾಗಿದೆ.

ಪಂಚತಾರಾ ಹೋಟೆಲ್`ನ ನೈಟ್ ಕ್ಲಬ್`ಗೆ ಬಂದ ನಟನ ಫೋಟೋ ಕ್ಲಿಕ್ಕಿಸಲು ಫೋಟೋಗ್ರಾಫರ್ ಯತ್ನಿಸಿದ್ದಾನೆ> ಈ ಸಂದರ್ಭ ಕೋಪಗೊಂಡ ಅರ್ಜುನ್ ರಾಂಪಾಲ್, ಕ್ಯಾಮೆರಾ ಕಿತ್ತು ಗುಮಪಿನೆಡೆಗೆ ಎಸೆದಿದ್ದಾನೆ. ಈ ಸಂದರ್ಭ ವ್ಯಕ್ತಿಯೊಬ್ಬಲ ತಲೆಗೆ ಕ್ಯಾಮೆರಾ ಬಿದ್ದು ಗಾಯವಾಗಿದೆ.

ಬೆಳಗಿನ ಜಾವ 3.30ರ ಸುಮಾರಿಗೆ ಈ ಘಟನೆ ನಡೆದಿದ್ದು, ಈ ಬಗ್ಗೆ ನ್ಯಾಯ ಕೇಳಲು ಹೋದ ನನ್ನನ್ನ ಬೌನ್ಸರ್`ಗಳು ನೈಟ್`ಕ್ಲಬ್`ನಿಂದ ಹೊರ ಹಾಕಿದರು ಎಂದು ಗಾಯಾಳು ಆರೋಪಿಸಿದ್ದಾನೆ. ಈ ಬಗ್ಗೆ ಅರ್ಜುನ್ ರಾಂಪಾಲ್ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ಉಪ್ಪಿನಂಗಡಿಗೆ ಐಶ್ವರ್ಯಾ ರೈ ಬಂದಿದ್ದೇಕೆ? ಇಲ್ಲಿದೆ ನೋಡಿ ಫೋಟೋ..!