ಅಮಿರ್ ಖಾನ್ ಅಭಿನಯದ 'ದಂಗಾಲ್' ಚಿತ್ರ ಪ್ರಚಾರ ಮಾಡಲಿರುವ ಅಜಯ್ ದೇವಗನ್
ಮುಂಬೈ , ಶನಿವಾರ, 16 ಜುಲೈ 2016 (18:58 IST)
ಬಾಲಿವುಡ್ ನಟ ಅಮಿರ್ ಖಾನ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ದಂಗಾಲ್' ಚಿತ್ರದ ಪ್ರಚಾರದಲ್ಲಿ ಅಜಯ್ ದೇವಗನ್ ಭಾಗಿಯಾಗಲಿದ್ದಾರೆ. ದಗಾಂಲ್ ಚಿತ್ರವನ್ನು ಪ್ರಚಾರ ಮಾಡಲಿದ್ದೇನೆ ಎಂದು ಅಜಯ್ ದೇವಗನ್ ಟ್ವಿಟ್ ಮಾಡಿದ್ದಾರೆ. ಮಹಿಳಾ ಸಶಸ್ತೀಕರಣ ಬಗ್ಗೆ ಮಾತನಾಡಿರುವ ಅವರು 'ಮೈ ಗರ್ಲ್ಸ್ ಆಂಡ್ ಮೈ ಸ್ಟ್ರೆತ್' ಅಂತ ಅಜಯ್ ದೇವಗನ್ ಬರೆದುಕೊಂಡಿದ್ದಾರೆ.
ಇನ್ನೂ ದಂಗಾಲ್ ಚಿತ್ರವು ಮಹಾವೀರ್ ಸಿಂಗ್ ಜೀವನಾಧಾರಿತ ಚಿತ್ರವಾಗಿದ್ದು, ಮಹಾವೀರ್ ತಮ್ಮ ಮಕ್ಕಳಾದ ಗೀತಾ ಹಾಗೂ ಬಬಿತಾರನ್ನು ಕುಸ್ತಿಪಟುಗಳನ್ನಾಗಿ ಮಾಡಿದ್ದರು.
ಇನ್ನೂ ಚಿತ್ರದಲ್ಲಿ ಅಜಯ್ ದೇವಗನ್ ನಟಿಸುತ್ತಿಲ್ಲ. ಆದ್ರೂ ದಂಗಾಲ್ ಚಿತ್ರದ ಪ್ರಚಾರದಲ್ಲಿ ಅಜಯ್ ದೇವಗನ್ ಪ್ರಚಾರ ಮಾಡುತ್ತಿರುವುದು ವಿಶೇಷ.
ಅಲ್ಲದೇ ಗೀತಾ ಹಾಗೂ ಬಬಿತಾ 2010ರಲ್ಲಿ ಕಾಮನ್‌ವೆಲ್ತ್ ಪಂದ್ಯದಲ್ಲಿ ಸಿಲ್ವರ್ ಹಾಗೂ ಗೋಲ್ಡ್ ಮೆಡಲ್ ಪಡೆದುಕೊಂಡಿದ್ದರು. ಅಮೀರ್ ಖಾನ್ ದಂಗಲ್ ಸಿನಿಮಾದಲ್ಲಿ ಕುಸ್ತಿಪಟುವಾಗಿ ಕಾಣಿಸಿಕೊಳ್ಳುತ್ತಿದ್ದಾರೆ.ಅದಕ್ಕಾಗಿ ತಮ್ಮ ದೇಹ ತೂಕವನ್ನು ಅವರು ಹೆಚ್ಚಿಸಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ
ಮುಂದಿನ ಸುದ್ದಿ