ಬಾಲಿವುಡ್ ನಟ ಇರ್ಫಾನ್ ಖಾನ್ ಹಿಂದಿ ಚಿತ್ರರಂಗದ ಕುರಿತು ತಮ್ಮ ಅಭಿಪ್ರಾಯವನ್ನೇ ಬಿಚ್ಚಿಟ್ಟಿದ್ದಾರೆ.ಬಾಲಿವುಡ್‌ನಲ್ಲಿ ಯಾವುದೇ ಒಬ್ಬ ನಟ ಸಮಸ್ಯೆಗೆ ಸಿಲುಕಿದ್ರೆ ಬೆಂಬಲ ನೀಡಲಾಗುವುದಿಲ್ಲ ಎಂದು ತಿಳಿಸಿದ್ದಾರೆ. ಇಚೆಗಷ್ಟೇ ಸಲ್ಮಾನ್ ಖಾನ್ ಮಹಿಳೆಯರ ರೇಪ್ ಕುರಿತಂತೆ ವಿವಾದಾದ್ಮಕ ಹೇಳಿಕೆ ನೀಡಿದ್ದರು.
ಈ ಬಗ್ಗೆ ಮಾತನಾಡಿರುವ ನಟ ಇರ್ಫಾನ್ ಖಾನ್, ಸಲ್ಲು ಹೇಳಿಕೆಗೆ ಪ್ರತಿಕ್ರಿಯೆ ನೀಡುವಂತೆ ಬಾಲಿವುಡ್‌ನ ಹಲವು ಮಂದಿಯನ್ನು ಕೇಳಲಾಗಿತ್ತು. ಆದ್ರೆ ಕೆಲವರು ಸಲ್ಲು ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಲು ಹಿಂಜರಿದಿದ್ದರು ಎಂದು ತಿಳಿಸಿದ್ದಾರೆ.
ನಿಮಗೆಲ್ಲರಿಗೂ ಗೊತ್ತಿರುವ ಹಾಗೇ ಇಂಡಸ್ಟ್ರಿ ಮರೆಯಾಗಿದ್ದೇಯಾ?.. ಚಿತ್ರರಂಗವು ಹೇಗೆ ಇದೆವೋ ಹಾಗೆಯೇ ನ್ಯೂಸ್ ಬರುತ್ತದೆ ಎಂದು ನಟ ಇರ್ಫಾನ್ ಖಾನ್ ತಿಳಿಸಿದ್ದಾರೆ.
ಉಡ್ತಾ ಪಂಜಾಬ್ ಹಾಗೂ ಗ್ರೇಟ್ ಗ್ರ್ಯಾಂಡ್ ಮಸ್ತಿ ಚಿತ್ರಗಳು ರಿಲೀಸ್ ಕಾಣುವ ಮುನ್ನವೇ ಆನ್‌ಲೈನ್‌ನಲ್ಲಿ ಲೀಕ್ ಆಗಿದ್ದವು. ಇಂಥ ವೇಳೆಯಲ್ಲಿ ತಮ್ಮದೇ ಚಿತ್ರ ಅಂತ ಭಾವಿಸಿ ಒಗ್ಗಟ್ಟು ತೋರಬೇಕಿತ್ತು. ಇಂಥ ಸಂದರ್ಭದಲ್ಲಿ ಚಿತ್ರರಂಗದಲ್ಲಿ ಎಲ್ಲರೂ ಒಗ್ಗಟ್ಟು ತೋರುವುದು ಉತ್ತಮ ಎಂದು ಇರ್ಫಾನ್ ಖಾನ್ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು
ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ