ಅಜಯ್ ದೇವಗನ್ ಅಭಿನಯದ 'ಶಿವಯ್ಯ' ಚಿತ್ರದ ಪೋಸ್ಟರ್ ಇದೀಗ ವಿವಾದಕ್ಕೆ ಕಾರಣವಾಗಿದೆ. ಲಾರ್ಡ್ ಶಿವನ ಭಾವಚಿತ್ರ ಮೇಲೆ ಅಜಯ್ ದೇವಗನ್ ತಮ್ಮ ಕಾಲಲ್ಲಿ ಶೂ ಧರಿಸಿ ಹತ್ತಿರುವುದರ ಬಗ್ಗೆ ಆರೋಪ ಕೇಳಿ ಬಂದಿದೆ.
ಈ ಚಿತ್ರದಲ್ಲಿ ಅಜಯ್ ದೇವಗನ ತಮ್ಮ ಕಾಲನಲ್ಲಿ ಶೂ ಧರಿಸಿ ಲಾರ್ಡ್ ಶಿವನ ಭಾವಚಿತ್ರದ ಮೇಲೆ ಹತ್ತುತ್ತಿರುವುದರ ಬಗ್ಗೆ ವಿರೋಧ ವ್ಯಕ್ತವಾಗಿದ್ದು, ಅಜಯ್ ದೇವಗನ್‌ಗೆ ಮತ್ತಷ್ಟು ಸಂಕಷ್ಟ ಬಂದೊದಗಿದೆ.
ಕೆಲ ದಿನಗಳ ಹಿಂದೆ ಶಿವಯ್ಯ ಚಿತ್ರದ ಪೋಸ್ಟರ್ ರಿಲೀಸ್ ಆಗಿತ್ತು, ಆ ಪೋಸ್ಟರ್‌ನಲ್ಲಿ ಅಜಯ್ ದೇವಗನ್ ಕಾಣಿಸಿಕೊಂಡಿದ್ರು.. ಆದ್ರೆ ಈ ಪೋಸ್ಟರ್‌ನಲ್ಲಿ ಅಜಯ್ ದೇವಗನ್ ಕಾಲಲ್ಲಿ ಶೂ ಧರಿಸಿ ಹತ್ತುತ್ತಿರುವುದರ ಬಗ್ಗೆ ಕೇಳಿ ಬಂದಿದ್ದು, ಇನ್ನೂ ಆದ್ದರಿಂದ ಹಿಂದೂ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ಕೇಸ್ ದಾಖಲು ಮಾಡಲಾಗಿದೆ. ದೆಹಲಿಯ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ಸಲ್ಲಿಸಲಾಗಿದೆ.
ಇನ್ನೂ ಹಿಂದೂಗಳ ಆರಾಧ್ಯ ದೈವವಾಗಿರುವ ಲಾರ್ಡ್ ಶಿವ ಭಕ್ತರಿಗೆ ನೋವಾಗಿದ್ದು, ಅವರ ಭಾವನೆಗಳಿಗೆ ಅವಮಾನ ಮಾಡಿದ್ದಂತಾಗಿದ್ದು, ಮುಂದಿನ ದಿನಗಳಲ್ಲಿ ಅಜಯ್ ದೇವಗನ್ ಹಾಗೂ ಚಿತ್ರ ತಂಡಕ್ಕೆ ಸಂಕಷ್ಟ ಎದುರಾಗಲಿದೆ ಎನ್ನಲಾಗ್ತಿದೆ.