ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಕಬಾಲಿ ಚಿತ್ರ ತೆರೆ ಕಾಣುತ್ತಿದೆ. ಜುಲೈ 1ರಂದು ತೆರೆ ಕಾಣಲು ಸಜ್ಜಾಗಿದೆ. ಈ ಮಧ್ಯೆ ಸೂಪರ್ ಸ್ಟಾರ್ ರಜನಿಕಾಂತ್ ಅಮೇರಿಕಾದಲ್ಲಿದ್ದಾರಂತೆ. ಸದ್ಯದ ಮಾಹಿತಿ ಪ್ರಕಾರ ರಜನಿಕಾಂತ್ ಯುಎಸ್‌ನಲ್ಲಿದ್ದಾರೆ. ರಜನಿಕಾಂತ್ ಅಲ್ಲಿ ಮಾಡ್ತಿರೋದೇನು ಅನ್ಕೋಂಡ್ರಾ.. ರಜನಿ ತಮ್ಮ ಫ್ಯಾಮಿಲಿ ಜತೆಗೆ ಹಾಲಿಡೇ ಎಂಜಾಯ್ ಮಾಡ್ತಿದ್ದಾರೆ
ಇನ್ನೂ ರಜನಿಕಾಂತ್ 2.0 ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಕೆಲ ಶೂಟಿಂಗ್ ನಡೆಯುತ್ತಿದೆ. ಇನ್ನೂ ಚಿತ್ರದ ಶೂಟಿಂಗ್ ಆಗಬೇಕಿದೆ. ಕೆಲ ದಿನಗಳಿಂದ ರಜನಿ ಬ್ರೇಕ್ ತೆಗೆದುಕೊಳ್ಳಬೇಕು ಎಂದು ನಿರ್ಧರಿಸಿದ್ದರು. ಅದಕ್ಕಾಗಿ ಅವರು ಎರಡು ವಾರಗಳ ಕಾಲ ಅಮೇರಿಕಾಕ್ಕೆ ಹಾರಿದ್ದಾರೆ. ಅಲ್ಲಿ ಎರಡು ವಾರಗಳ ಕಾಲ ಇರಲಿದ್ದಾರಂತೆ. ಅದಾದ ಬಳಿಕ ಎಂದಿನಂತೆ ಮೆಗಾಸ್ಟಾರ್ ರಜನಿಕಾಂತ್ ಚಿತ್ರದ ಶೂಟಿಂಗ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.
ಬಹುದಿನಗಳಿಂದ ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಎಂದು ಕಾತುರದಲ್ಲಿದ್ದ ಅಭಿಮಾನಿಗಳಿಗೆ ಕಡೆಗೂ ಚಿತ್ರದ ಡೇಟ್ ಫಿಕ್ಸ್ ಆಗಿದೆ. ಜುಲೈ 1ರಂದು ಚಿತ್ರ ಬಿಡುಗಡೆಯಾಗುತ್ತಿದೆ. ಇದ್ದರಿಂದ ರಜನಿ ಅಭಿಮಾನಿಗಳಿಗು ಫುಲ್ ಖುಷ್ ಮೂಡ್‌ನಲ್ಲಿದ್ದಾರೆ.
ಈ ಹಿನ್ನೆಲೆಯಲ್ಲಿ ಚಿತ್ರದ ಒಂದೊಂದು ಪೋಸ್ಟರ್ ಸಾಕಷ್ಟು ಕ್ರೇಜ್ ಮೂಡಿಸಿದೆ. ಪೋಸ್ಚರ್‌ನಲ್ಲಿ ರಜನಿಕಾಂತ್‌ರ ಎಲ್ಲಾ ಆ್ಯಕ್ಷನ್‌ಗಳು ನೋಡುಗರನ್ನು ಮೋಡಿ ಮಾಡುವಂತಿವೆ.
ಪಾ ರಂಜಿತ್ ನಿರ್ದೆಶನದ ರಜನಿಕಾಂತ್ ನಟಿಸಿರುವ ಕಬಾಲಿ ಚಿತ್ರದ ಶೂಟಿಂಗ್ ಮಲೇಷ್ಯಾದಲ್ಲಿ ನಡೆಸಲಾಗಿದೆ. ಇನ್ನೂ ಚಿತ್ರದಲ್ಲಿ ರಾಧಿಕಾ ಅಪ್ಟೆ, ಕಿಶೋರ್, ಕಲೈಯರಸನ್, ಧನಸಿಕಾ ಮತ್ತು ದಿನೇಶ್ ರವಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.