Publish Date: Tue, 05 Sep 2017 (08:28 IST)
Updated Date: Tue, 05 Sep 2017 (08:29 IST)
ಮುಂಬೈ: ಅಜಯ್ ದೇವಗನ್ ಮತ್ತು ಕಾಜೋಲ್ ಬಾಲಿವುಡ್ ನ ಮೋಸ್ಟ್ ಮೇಡ್ ಫಾರ್ ಈಚ್ ಅದರ್ ಕಪಲ್. ಇವರಿಬ್ಬರ ಜೋಡಿ ನೋಡಿ ಅದೆಷ್ಟು ಜನ ಹೊಟ್ಟೆ ಉರ್ಕೊಂಡಿದ್ದಾರೋ..
ಅಷ್ಟು ಚೆನ್ನಾಗಿ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು 18 ವರ್ಷದಿಂದ ಸಂಸಾರ ನಡೆಸುತ್ತಲೇ ಇದ್ದಾರೆ. ಇತ್ತೀಚೆಗೆ ಕಾಜೋಲ್ ತನ್ನ ಬಾಯಿಬಡುಕಿ ಸ್ವಭಾವಕ್ಕೆ ಅಜಯ್ ಬೈತಾರೆ ಎಂದಿದ್ದರು.
ಇದೀಗ ಕಾಜೋಲ್ ಸರದಿ. ಅಜಯ್ ನಟನೆಯ ಬಾದ್ ಶಾಹೋ ಸಿನಿಮಾ ಭರ್ಜರಿಯಾಗಿ ತೆರೆ ಕಾಣುತ್ತಿದೆ. ಈ ಚಿತ್ರದ ಯಶಸ್ಸಿನ ಖುಷಿಯಲ್ಲಿರುವ ಅಜಯ್ ಅಭಿಮಾನಿಗಳಿಗೆ ಟ್ವಿಟರ್ ನಲ್ಲಿ ಅಜಯ್ ಟಾಕ್ಸ್ ಎಂದು ಹ್ಯಾಶ್ ಟ್ಯಾಗ್ ಹಾಕಿ ಏನು ಬೇಕಾದರೂ ಕೇಳಿ ಎಂದಿದ್ದರು.
ಅದಕ್ಕೆ ಅಜಯ್ ಪತ್ನಿ ಕಾಜೋಲ್.. ಸರಿ ಈಗ ಊಟಕ್ಕೆ ಯಾವಾಗ ಮನೆಗೆ ಬರ್ತೀರಿ ಹೇಳ್ರೀ.. ಎಂದು ಅಜಯ್ ಹ್ಯಾಶ್ ಟ್ಯಾಗ್ ಹಾಕಿ ಕಾಲೆಳೆದಿದ್ದಾರೆ. ಅದಕ್ಕೆ ಅಜಯ್ ಭರ್ಜರಿ ರಿಪ್ಲೈ ಕೊಟ್ಟಿದ್ದು ‘ನಾನು ಡಯಟ್ ನಲ್ಲಿದ್ದೀನಿ!’ ಎಂದಿದ್ದಾರೆ. ಇವರಿಬ್ಬರ ಟ್ವಿಟರ್ ತುಂಟಾಟ ನೋಡಿ ಅಭಿಮಾನಿಗಳು ಮನಸ್ಸು ತುಂಬಿ ನಕ್ಕಿದ್ದಾರೆ.