ಮುಂಬೈ: ಐಶ್ವರ್ಯಾ ರೈ ಏ ದಿಲ್ ಹೇ ಮುಷ್ಕಿಲ್ ಚಿತ್ರದಲ್ಲಿ ನಟಿಸಿದ್ದು ಬಚ್ಚನ್ ಪರಿವಾರದವರಿಗೆ ಇಷ್ಟವಾಗಿಲ್ಲ. ಹೀಗಾಗಿ ಐಶ್ ಮೇಲೆ ಕುಟುಂಬದವರು ಮುನಿಸಿಕೊಂಡಿದ್ದಾರೆ ಎಂದೆಲ್ಲಾ ವರದಿಯಾಗಿತ್ತು. ಅದನ್ನು ಸುಳ್ಳು ಮಾಡುವಂತೆ ಐಶ್ವರ್ಯಾ ತನ್ನ ಕುಟುಂಬದವರಿಗಾಗಿ ಈ ಚಿತ್ರದ ವಿಶೇಷ ಪ್ರದರ್ಶನ ಏರ್ಪಡಿಸಿದ್ದಾರೆ.
ಏ ದಿಲ್ ಹೇ ಮುಷ್ಕಿಲ್ ಚಿತ್ರದಲ್ಲಿ ರಣಬೀರ್ ಜತೆ ಐಶ್ವರ್ಯಾ ತೀರಾ ರೊಮ್ಯಾಂಟಿಕ್ ಸನ್ನಿವೇಶಗಳಲ್ಲಿ ಅಭಿನಯಿಸಿದ್ದು ಬಚ್ಚನ್ ಪರಿವಾರ ಅಸಮಾಧಾನಗೊಂಡಿದೆ. ಹೀಗಾಗಿ ಚಿತ್ರದ ಪ್ರೀಮಿಯರ್ ಪ್ರದರ್ಶನಕ್ಕೆ ಬಾಲಿವುಡ್ ನ ಹಲವರು ಬಂದಿದ್ದರೂ ಐಶ್ ಮತ್ತು ಕುಟುಂಬದವರು ಬಂದಿರಲಿಲ್ಲ.
ವಿಶೇಷ ಎಂದರೆ ಅಮಿತಾಭ್ ಬಚ್ಚನ್ ಅಥವಾ ಅಭಿಷೇಕ್ ಬಚ್ಚನ್ ತಮ್ಮ ಸಾಮಾಜಿಕ ಜಾಲತಾಣಗಳಲ್ಲೂ ಚಿತ್ರದ ಬಗ್ಗೆ ಚಕಾರವೆತ್ತಿಲ್ಲ. ಕರಣ್ ಜೋಹರ್ ಮೇಲೆ ಬಚ್ಚನ್ ಪರಿವಾರಕ್ಕೆ ಅಸಮಧಾನ ಇದೆ ಎಂದೂ ಹೇಳಲಾಗುತ್ತಿತ್ತು. ಈಗ ಸೊಸೆ ತೋರಿಸುವ ವಿಶೇಷ ಪ್ರದರ್ಶನ ನೋಡಿದ ಮೇಲಾದರೂ ಬಚ್ಚನ್ ಪರಿವಾರ ಏನು ಹೇಳುತ್ತದೆ ಕಾದು ನೋಡಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ