ಐಶ್ವರ್ಯ ರೈ ಅಭಿನಯದ ಸರಬ್ಜಿತ್ ಚಿತ್ರಕ್ಕೆ ಉತ್ತರಪ್ರದೇಶದಲ್ಲಿ ತೆರಿಗೆ ಮುಕ್ತಗೊಳಿಸಲಾಗಿದೆ. ಈ ಚಿತ್ರ ಮೇ 20ರಂದು ರಿಲೀಸ್ ಆಗಲಿದೆ. ಈ ಹಿನ್ನೆಲೆಯಲ್ಲಿ ಉತ್ತರಪ್ರದೇಶದಲ್ಲಿ ಸರಬ್ಜಿತ್ ಚಿತ್ರವನ್ನು ತೆರಿಗೆ ಮುಕ್ತಗೊಳಿಸುವುದರ ಬಗ್ಗೆ ಖಚಿತ ಪಡಿಸಲಾಗಿದೆ. ಇದು ಇಡೀ ಚಿತ್ರತಂಡ ಹಾಗೂ ನಿರ್ಮಾಪಕರಿಗೆ ಖುಷಿಯನ್ನುಂಟು ಮಾಡಿದೆ.
ಇನ್ನೂ ಚಿತ್ರದಲ್ಲಿ ಐಶ್ವರ್ಯ ರೈ ಅವರ ನಟನೆ ಎಲ್ಲರನ್ನು ತನ್ನತ್ತ ಸೆಳೆಯುವಂತೆ ಮಾಡುತ್ತದೆ.ಇನ್ನೂ ಈ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ ಅಮಲ್ ಮಲ್ಲಿಕ್ , ಸಾಹಿಲ್ ಪ್ರಿತೇಶ್, ತನಿಶ್ಕಾ ಬೇಚಿ, ಶಶಿ ಮೊದಲಾದವರು...
ಮುಖ್ಯ ಪಾತ್ರದಲ್ಲಿ ರಂದೀಪ್ ಹೂಡಾ ಹಾಗೂ ಐಶ್ವರ್ಯ ರೈ ಬಚ್ಚನ್ ಅವರ ಕಾಂಬಿನೇಷನ್ ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತದೆ. ಇವರರಿಬ್ಬರ ನಟನೆ ನಿಜಕ್ಕೂ ಈ ಚಿತ್ರದಲ್ಲಿ ಸುಂದರವಾಗಿ ಮೂಡಿ ಬಂದಿದೆ.
ನಿರ್ದೇಶಕ ಓಮಂಗ್ ಅವರ ಸರಬ್ಜಿತ್ ಚಿತ್ರ ಕಥಾ ವಸ್ತು ಅದ್ಭೂತವಾಗಿ ಹೆಣಯಲಾಗಿದೆ. ಅದಕ್ಕಾಗಿ ಪ್ರೇಕ್ಷಕರಿಗೆ ಸಿನಿಮಾ ಇಷ್ಟವಾಗುತ್ತದೆ. ಇನ್ನೂ ಅರ್ಜಿತ್ ಸಿಂಗ್, ತುಲಸಿ ಕುಮಾರ್ ಹಾಗೂ ಸೋನು ನಿಗಂ ಈ ಚಿತ್ರಕ್ಕೆ ಹಾಡು ಹಾಡಿದ್ದಾರೆ. ಸೋನು ನಿಗಂ ಹಾಗೂ ಅರ್ಜಿತ್ ಧ್ವನಿ ನಿಮ್ಮ ಹೃದಯ ತಟ್ಟದೇ ಇರದು. ಸರಬ್ಜಿತ್ ಸಿನಿಮಾ ಮೇ. 20ರಂದು ರಿಲೀಸ್ ಆಗಲಿದೆ.
ಸರಬ್ಜಿತ್ ಚಿತ್ರದಲ್ಲಿ ಐಶ್ವರ್ಯ ದಲ್ಬಿರ್ ಕೌರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರ ಐಶ್ವರ್ಯ ಅವರಿಗೆ ಸಾಕಷ್ಟು ನಿರೀಕ್ಷೆ ಮೂಡಿಸಿದೆ ಎನ್ನಲಾಗಿದೆ