ಐಶ್ವರ್ಯ ಅವರ ಮುಂಬರುವ ಚಿತ್ರ ಸರಬ್ಜಿತ್ ಚಿತ್ರಕ್ಕಾಗಿ ಐಶ್ವರ್ಯ ರೈ ಚಿತ್ರದ ಪ್ರಚಾರದಲ್ಲಿ ಬ್ಯೂಸಿ ಇದ್ದಾರೆ. ಗ್ಲಾಮರಸ್ ಚಾರಿಟಿ ಸಮಾರಂಭದಲ್ಲಿ ಭಾಗಿಯಾಗಲ್ವಂತೆ.. ಮೇ 19ರಂದು ನಡೆಯುವ ಸಮಾರಂಭದಲ್ಲಿ ಐಶ್ ಭಾಗಿಯಾಗ್ತಿಲ್ಲ.. ಸರಬ್ಜಿತ್ ಜೀವನ ಆಧಾರಿತ ಚಿತ್ರವು ಮೇ 20ರಂದು ರಿಲೀಸ್ ಆಗಲಿದೆ.
ಈ ಹ್ನಿನೆಲೆಯಲ್ಲಿ ಐಶ್ವರ್ಯ ರೈ ಸಿನಿಮಾ ಪ್ರಚಾರದಲ್ಲಿ ತೊಡಗಿದ್ದಾರೆ. ಇದಕ್ಕಾಗಿ ಅವರು ಭಾಗಿಯಾಗುವುದಿಲ್ವಂತೆ.. ಮುಖ್ಯ ಪಾತ್ರದಲ್ಲಿ ರಂದೀಪ್ ಹೂಡಾ ಹಾಗೂ ಐಶ್ವರ್ಯ ರೈ ಬಚ್ಚನ್ ಅವರ ಕಾಂಬಿನೇಷನ್ ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತದೆ. ಇವರರಿಬ್ಬರ ನಟನೆ ನಿಜಕ್ಕೂ ಈ ಚಿತ್ರದಲ್ಲಿ ಸುಂದರವಾಗಿ ಮೂಡಿ ಬಂದಿದೆ.
ನಿರ್ದೇಶಕ ಓಮಂಗ್ ಅವರ ಸರಬ್ಜಿತ್ ಚಿತ್ರ ಕಥಾ ವಸ್ತು ಅದ್ಭೂತವಾಗಿ ಹೆಣಯಲಾಗಿದೆ. ಚಿತ್ರದ ಹಾಡುಗಳು ಹಾಗೂ ಹಿನ್ನೆಲೆ ಸಂಗೀತ ಮನ ಮುಟ್ಟುವಂತೆ ಮಾಡುತ್ತವೆ. ಇನ್ನೂ ಚಿತ್ರದ ಹೊಸ ಹಾಡು 'ದರ್ದ' ಉತ್ತಮವಾಗಿ ಮೂಡಿ ಬಂದಿದೆ.
ಅದಕ್ಕಾಗಿ ಪ್ರೇಕ್ಷಕರಿಗೆ ಸಿನಿಮಾ ಇಷ್ಟವಾಗುತ್ತದೆ. ಇನ್ನೂ ಸೋನು ನಿಗಮ್ ಈ ಚಿತ್ರಕ್ಕೆ ಹಾಡು ಹಾಡಿದ್ದಾರೆ. ಸೋನು ಧ್ವನಿ ನಿಮ್ಮ ಹೃದಯ ತಟ್ಟದೇ ಇರದು. ಸರಬ್ಜಿತ್ ಸಿನಿಮಾ ಮೇ. 20ರಂದು ರಿಲೀಸ್ ಆಗಲಿದೆ.
ಸರಬ್ಜಿತ್ ಚಿತ್ರದಲ್ಲಿ ಐಶ್ವರ್ಯ ದಲ್ಬಿರ್ ಕೌರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರ ಐಶ್ವರ್ಯ ಅವರಿಗೆ ಸಾಕಷ್ಟು ನಿರೀಕ್ಷೆ ಮೂಡಿಸಿದೆ ಎನ್ನಲಾಗಿದೆ.