Select Your Language

Notifications

webdunia
webdunia
webdunia
webdunia

ಅತ್ಯುತ್ತಮ ನಟಿ ಪ್ರಶಸ್ತಿ ಮುಡಿಗೇರಿಸಿಕೊಂಡ ಐಶ್ವರ್ಯಾ ರೈ

ಅತ್ಯುತ್ತಮ ನಟಿ ಪ್ರಶಸ್ತಿ ಮುಡಿಗೇರಿಸಿಕೊಂಡ ಐಶ್ವರ್ಯಾ ರೈ
Mumbai , ಶುಕ್ರವಾರ, 6 ಜನವರಿ 2017 (07:02 IST)
ಬಾಲಿವುಡ್ ನಟಿ ಐಶ್ವರ್ಯಾ ರೈ ಅಭಿನಯದ ’ಸರಬ್‍ಜಿತ್’ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟಿ ಲಯನ್ಸ್ ಗೋಲ್ಡನ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಮುಂಬೈನ ಹೊರವಲಯದಲ್ಲಿರುವ ಸಭಾಂಗಣವೊಂದರಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.
 
ಈ ಸಂಭ್ರಮಕ್ಕೆ ಹಲವು ಬಾಲಿವುಡ್ ತಾರೆಗಳು, ರಾಜಕೀಯ ವ್ಯಕ್ತಿಗಳು ಸಾಕ್ಷಿಯಾದರು. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸತಿಮಣಿ ಅಮೃತಾ ಫಡ್ನವಿಸ್ ಅವರು ಐಶ್ವರ್ಯಾ ರೈ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. 
 
ನೈಜ ಘಟನೆ ಆಧಾರಿತವಾಗಿ ಒಮಂಗ್ ಕುಮಾರ್ ನಿರ್ದೇಶನದದ್ ಸರಬ್‌ಜಿತ್ ಚಿತ್ರದಲ್ಲಿ ಐಶ್ವರ್ಯಾ ರೈ ಅವರೊಂದಿಗೆ ರಣದೀಪ್ ಹೂಡಾ, ರಿಚಾ ಚಡ್ಡಾ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಕಳೆದ ವರ್ಷ ಮೇ ತಿಂಗಳಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರ ವಿಮರ್ಶಕರ ಮೆಚ್ಚುಗೆಗೆ ಪಾತ್ರವಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಸೋನಾಕ್ಷಿ ಸಿನ್ಹಾಗೆ ಚಾಲೆಂಜಿಂಗ್ ಪಾತ್ರಗಳು ಬೇಕಂತೆ