Select Your Language

Notifications

webdunia
webdunia
webdunia
webdunia

ಮತ್ತೆ ವಿವಾದಾತ್ಮಕ ಟ್ವೀಟ್ ಮಾಡಿದ ರಾಮ್ ಗೋಪಾಲ್ ವರ್ಮಾ

ಮತ್ತೆ ವಿವಾದಾತ್ಮಕ ಟ್ವೀಟ್ ಮಾಡಿದ ರಾಮ್ ಗೋಪಾಲ್ ವರ್ಮಾ
Mumbai , ಸೋಮವಾರ, 24 ಏಪ್ರಿಲ್ 2017 (07:14 IST)
ಮುಂಬೈ: ಬಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಆಗಾಗ ವಿವಾದಾತ್ಮಕ ಟ್ವೀಟ್ ಗಳಿಂದಲೇ ಸುದ್ದಿ ಮಾಡುತ್ತಾರೆ. ಈ ಬಾರಿಯೂ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಬಗ್ಗೆ ವಿವಾದಾತ್ಮಕ ಸುದ್ದಿ ಮಾಡಿದ್ದಾರೆ.

 
‘ರಾಷ್ಟ್ರೀಯ ಪ್ರಶಸ್ತಿಯೂ ಸೇರಿದಂತೆ ಯಾವುದೇ ಭಾರತೀಯ ಸಿನಿಮಾ ಪ್ರಶಸ್ತಿಗಳ ಬಗ್ಗೆ ಕೇರ್ ಮಾಡಲ್ಲ’ ಎಂದು ರಾಮ್ ಗೋಪಾಲ್ ವರ್ಮಾ ಟ್ವೀಟ್ ಮಾಡಿದ್ದಾರೆ. ಅಷ್ಟೇ ಅಲ್ಲದೆ, ನಾನು ಮಾತ್ರವಲ್ಲ, ಅಷ್ಟು ದೊಡ್ಡ, ಗುಣಮಟ್ಟದ ಸಿನಿಮಾ ಮಾಡುವ ಅಮೀರ್ ಖಾನ್ ಕೂಡಾ ರಾಷ್ಟ್ರೀಯ ಪ್ರಶಸ್ತಿಗಳಿಗೆ ಕೇರ್ ಮಾಡಲ್ಲ.

ಅದಕ್ಕೇ ಅಂತಹ ಸಮಾರಂಭಗಳಿಗೆ ಅಮೀರ್ ಖಾನ್ ಭಾಗವಹಿಸುವುದೂ ಇಲ್ಲ ಎಂದು ರಾಮ್ ಗೋಪಾಲ್ ವರ್ಮಾ ವಿವಾದ ಸೃಷ್ಟಿಸಿದ್ದಾರೆ. ಈ ಟ್ವೀಟ್ ಗೆ ಇನ್ನೆಷ್ಟು ವಿವಾದ ಸೃಷ್ಟಿಯಾಗುತ್ತೋ?

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಗೂಗಲ್ ಮುಖಪುಟದಲ್ಲೂ ಡಾ. ರಾಜ್!