ಬಾಲಿವುಡ್ನ ಈ ಜೋಡಿ ’ಆಶಿಕಿ 2’ ಚಿತ್ರದ ಮೂಲಕ ಚಿರಪರಿಚಿತ. ಶ್ರದ್ಧಾ ಕಪೂರ್ ಮತ್ತು ಆದಿತ್ಯ ರಾಯ್ ಈ ಚಿತ್ರದ ಮೂಲಕ ಸಕ್ಸಸ್ಫುಲ್ ಜೋಡಿ ಎನ್ನಿಸಿಕೊಂಡರು. ಈಗ ಇದೇ ಜೋಡಿ ಓಕೆ ಜಾನು ಚಿತ್ರದ ಮೂಲಕ ಇನ್ನೊಂದು ಇನ್ನಿಂಗ್ಸ್ ಶುರು ಮಾಡಿದೆ.
ಈ ಚಿತ್ರತಂಡ ಇತ್ತೀಚೆಗೆ ಹಮ್ಮ ಹಮ್ಮ ಎಂಬ ಹಾಡನ್ನು ಬಿಡುಗಡೆ ಮಾಡಿದೆ. ಆ ಹಾಡಿಗೆ ಒಳ್ಳೆ ಪ್ರತಿಕ್ರಿಯೆ ಕೂಡ ಸಿಕ್ಕಿದೆ. ಇದೀಗ ಇನ್ನೊಂದು ಟ್ರ್ಯಾಕ್ ಎನ್ನ ಸೋನು ಬಿಡುಗಡೆಯಾಗಿದೆ. ಸಾಮಾಜಿಕ ತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ ಈ ಹಾಡು.
ಇದೊಂದು ರೈನ್ ಸಾಂಗ್ ಆಗಿದ್ದು, ಆದಿತ್ಯಾ ಮತ್ತು ಶ್ರದ್ಧಾ ನಡುವಿನ ಹಾಟ್ ಕೆಮಿಸ್ಟ್ರಿ ಸಖತ್ ಆಗಿ ವರ್ಕ್ಔಟ್ ಆದಂಗಿದೆ. ಈ ಜೋಡಿಹಕ್ಕಿಗಳು ಮಳೆಯಲ್ಲಿ ಚುಂಬಿಸಿಕೊಳ್ಳುವ ದೃಶ್ಯವಂತೂ ಪಡ್ಡೆಗಳನ್ನು ಕಾಡುತ್ತಿದೆ. ಆಶಿಕಿ 2 ಚಿತ್ರದಲ್ಲಿ ಮಳೆ ನಿರ್ಣಾಯಕ ಪಾತ್ರವಹಿಸಿತ್ತು. ಇದೀಗ ಈ ಚಿತ್ರದಲ್ಲೂ ಮಳೆ ಸೀನು ಇರೋದು ವಿಶೇಷ. ಅಂದಹಾಗೆ ಇದು ಮಣಿರತ್ನಂ ಅವರ ತಮಿಳು ಚಿತ್ರ ಓ ಕಾದಲ್ ಕಣ್ಮಣಿ ಚಿತ್ರ ರೀಮೇಕ್. ಜನವರಿ 13, 2017ಕ್ಕೆ ಬಿಡುಗಡೆಯಾಗುತ್ತಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.