Webdunia - Bharat's app for daily news and videos

Install App

ತೆಲುಗು ಚಿತ್ರಕ್ಕೆ ಎಂಟ್ರಿ ಕೊಟ್ಟಿದ್ದಾರೆ ಬಾಲಿವುಡ್ ಬೆಡಗಿ ಅದಿತಿ ರಾವ್ ಹೈದರಿ

ಅತಿಥಾ
ಶನಿವಾರ, 24 ಫೆಬ್ರವರಿ 2018 (18:21 IST)
ಕಳೆದ ವರ್ಷದಲ್ಲಿ ಮಣಿ ರತ್ನಂ ಅವರ ತಮಿಳು ಚಿತ್ರ ಕಾಟ್ರು ವೆಲಿಯಿಡೈ ಚಿತ್ರದ ಯಶಸ್ಸಿನ ನಂತರ ಅದಿತಿ ರಾವ್ ಹೈದರಿ ತಮ್ಮ ಮೊದಲ ತೆಲುಗು ಚಿತ್ರಕ್ಕಾಗಿ ತಯಾರಿ ನಡೆಸುತ್ತಿದ್ದಾರೆ.
ರಾಷ್ಟ್ರೀಯ ಪ್ರಶಸ್ತಿ ವಿಜೇತ ಚಿತ್ರನಿರ್ಮಾಪಕ ಇಂದ್ರಗಂತಿ ಮೋಹನ್ ಕೃಷ್ಣ ಅವರ ನಿರ್ದೇಶನದ ಈ ಚಿತ್ರದ ಚಿತ್ರೀಕರಣ ಈಗಾಗಲೇ ಆರಂಭಿಸಿದ್ದು, ಗುರುವಾರ ಈ ಚಿತ್ರಕ್ಕೆ ಅಧಿಕೃತವಾಗಿ ''ಸಮ್ಮೋಹನಂ'' ಎಂದು ಹೆಸರಿಸಲ್ಪಟ್ಟಿದೆ. ಚಿತ್ರದ ಹೆಸರೇ ಹೇಳುವಂತೆ ಈ ಚಿತ್ರ ಒಂದು ರೋಮ್ಯಾಂಟಿಕ್, ಆಕರ್ಷಣೆಯ ಚಿತ್ರವಾಗಿದೆ. ಈ ಚಿತ್ರದಲ್ಲಿ ಸುಧೀರ್ ಬಾಬು ನಾಯಕರಾಗಿ ಅಭಿನಯಿಸಿದ್ದಾರೆ.
 
ಈ ಅವಕಾಶವನ್ನು ಉಪಯೋಗಿಸಿ ತಾಲಿವುಡ್‌ನಲ್ಲಿ ತನ್ನ ಛಾಪನ್ನು ಮೂಡಿಸಲು ಅದಿತಿ ಚಿತ್ರದಲ್ಲಿ ಹೆಚ್ಚಿನ ಭರವಸೆಯನ್ನು ಹೊಂದಿದ್ದಾರೆ. ಇನ್ನೂ ಕೆಲವು ವಾರಗಳ ಚಿತ್ರಿಕರಣವನ್ನು ಪೂರ್ಣಗೊಳಿಸಿ, ಮಣಿರತ್ನಂ ಅವರೊಂದಿಗಿನ ತನ್ನ ಎರಡನೆಯ ತಮಿಳು ಚಿತ್ರ ಚೇಕ್ಕಾ ಚಿವಂತ ವಾನಮ್ ಚಿತ್ರಕ್ಕೆ ಸೇರಿಕೊಳ್ಳಲಿದ್ದಾರೆ.
 
ನಟ ಸುಧೀರ್ ಬಾಬು, ನಟಿ ಅದಿತಿ ರಾವ್ ಹೈದರಿ ಅವರ ಸಮ್ಮೋಹನಂ ಚಿತ್ರದ ಮೊದಲ ಲುಕ್ ಈಗಾಗಲೇ ಬಿಡುಗಡೆಯಾಗಿದೆ. ಈ ವರ್ಷದ ಜುಲೈನಲ್ಲಿ ಸಮ್ಮೋಹನಂ ಬಿಡುಗಡೆಯಾಗಲಿದೆ.

ಸಂಬಂಧಿಸಿದ ಸುದ್ದಿ

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments