Select Your Language

Notifications

webdunia
webdunia
webdunia
webdunia

ಟರ್ಕಿಯಲ್ಲಿ ಭಾರತದ ನಟಿಯನ್ನ ದೋಚಿದ ಕ್ಯಾಬ್ ಡ್ರೈವರ್

ಟರ್ಕಿಯಲ್ಲಿ ಭಾರತದ ನಟಿಯನ್ನ ದೋಚಿದ ಕ್ಯಾಬ್ ಡ್ರೈವರ್
ಇಸ್ತಾಂಬುಲ್ , ಸೋಮವಾರ, 12 ಜೂನ್ 2017 (13:21 IST)
ಬಾಬಿಜಿ ಘರ್ ಪರ್ ಹೈ ಧಾರಾವಾಹಿಯ ಜನಪ್ರಿಯ ನಟಿ ಸೌಮ್ಯ ಟಂಡನ್ ಅವರ ಬಳಿ ಟರ್ಕಿಯ ಇಸ್ತಾಂಬುಲ್`ನಲ್ಲಿ ಕ್ಯಾಬ್ ಡ್ರೈವರ್ 60000 ರೂ. ದೋಚಿರುವ ಘಟನೆ ಬೆಳಕಿಗೆ ಬಂದಿದೆ.

ಕ್ಯಾಬ್`ನಲ್ಲಿ ತೆರಳುತ್ತಿದ್ದ ವೇಳೆ ಅರ್ಧದಲ್ಲೇ ಕ್ಯಾಬ್ ನಿಲ್ಲಿಸಿದ ಡ್ರೈವರ್ ಚೇಂಜ್ ಕೇಳಿದ್ದಾನೆ. ಮೀಟರ್ ಸ್ಟಾರ್ಟ್ ಆಗದಿದ್ದರೂ  ನಟಿ ಯೂರೋ ತೆಗೆದು ಡ್ರೈವರ್`ಗೆ ಕೊಟ್ಟಿದ್ದಾಳೆ. ಇದು ಖೋಟಾ ನೋಟು ಎಂದ ಡ್ರೈವರ್ ನಟಿಯನ್ನ ಜೋರಾಗಿ ಗದರಿಸಿ ಪರ್ಸ್`ಗೆ ಕೈಹಾಕಿ ಹಣ ಪಡೆದಿದ್ಧಾನೆ.  ಬಳಿಕ ನಟಿಯನ್ನ ನಿಲ್ಲಿಸಿ ಹೊರಟು ಹೋಗಿದ್ದಾನೆ. ಬಳಿಕ ನಟಿ ಪರ್ಸ್ ತೆಗೆದು ನೋಡಿದಾಗ 1000 ಯೂರೋ ಹಣ ಕಳುವಾಗಿರುವುದು ಕಂಡುಬಂದಿದೆ. ಟರ್ಕಿಯಲ್ಲಿ ಲಿರಾ ಮತ್ತು ಯೂರೋ ಎರಡೂ ಕರೆನ್ಸಿ ಚಲಾವಣೆ ಇದ್ದರೂ ನಟಿಯನ್ನ ಯಾಮಾರಿಸಿ ಕ್ಯಾಬ್ ಡ್ರೈವರ್ ಹಣ ದೋಚಿದ್ದಾನೆ.

ಪತಿ ಸೌರಭ್ ದೇವೇಂದ್ರ ಸಿಂಗ್ ಜೊತೆ ರಜೆ ಕಳೆಯಲು ನಟಿ ಸೌಮ್ಯ ಟಂಡನ್ ಟರ್ಕಿಗೆ ತೆರಳಿದ್ದರು. ಈ ಸಂದರ್ಭ ಸುಲಿಗೆ ಮಾಡಲಾಗಿದೆ.

ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಲಿಂಕ್ ಕ್ಲಿಕ್ ಮಾಡಿ..

http://kannada.
fantasycricket.webdunia.com/

Share this Story:

Follow Webdunia kannada

ಮುಂದಿನ ಸುದ್ದಿ

ಟಾಯ್ಲೆಟ್-ಎಕ್ ಪ್ರೇಮ್ ಕಥಾ ತ್ರೇಲರ್ ಬಿಡುಗಡೆ