ತನುಶ್ರೀ ಮೇಲೆ ಮತ್ತೆ ಆರೋಪ ಮಾಡಿದ ನಟಿ ರಾಖಿ ಸಾವಂತ್

Webdunia
ಬುಧವಾರ, 14 ನವೆಂಬರ್ 2018 (13:42 IST)
ಮುಂಬೈ : ರಿಂಗ್ ನಲ್ಲಿ ಕುಸ್ತಿಪಟು ರೊಬೆಲ್ ರಿಂದ ಹೊಡೆತ ತಿಂದು ಆಸ್ಪತ್ರೆ ಸೇರಿದ ಬಾಲಿವುಡ್ ನಟಿ ರಾಖಿ ಸಾವಂತ್ ಇದೀಗ ನಟಿ ತನುಶ್ರೀ ದತ್ತಾ ಮೇಲೆ ಆರೋಪವೊಂದನ್ನು ಮಾಡಿದ್ದಾಳೆ.


ನಟಿ ರಾಖಿ ಸಾವಂತ್ ಭಾನುವಾರ ಪಂಚಕುಲಾದ ದೇವಿಲಾಲ್ ಸ್ಟೇಡಿಯಂನಲ್ಲಿ ನಡೆದ ಸಿಡಬ್ಲ್ಯೂ ಚಾಂಪಿಯನ್ ಶಿಪ್ ನಲ್ಲಿ ಕುಸ್ತಿಪಟು ರೊಬೆಲ್ ಚಾಲೆಂಜ್ ಸ್ವೀಕರಿಸಿ ಆಕೆಯಿಂದ ಪೆಟ್ಟು ತಿಂದು ಆಸ್ಪತ್ರೆಗೆ ದಾಖಲಾಗಿದ್ದಾಳೆ. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಖಿ ಸಾವಂತ್ ಈ ಘಟನೆಯ ಬಗ್ಗೆ ವಿವರಿಸುತ್ತಾ ವಿಡಿಯೋವೊಂದನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾಳೆ.


ಈ ವಿಡಿಯೋದಲ್ಲಿ ದಿ ಗ್ರೇಟ್ ಖಲಿ ಜೊತೆಗಿರುವ ರಾಖಿ ಸಾವಂತ್, ನಾನು ಡಾನ್ಸ್ ಮಾಡಲು ರಿಂಗ್ ಒಳಗೆ ಹೋಗಿದ್ದೆ. ಆದ್ರೆ ರೊಬೆಲ್ ನನ್ನನ್ನು ಎತ್ತಿ ಬಿಸಾಕಿದ್ದಾಳೆ. ಘಟನೆ ಹಿಂದೆ ತನುಶ್ರೀ ಕೈವಾಡವಿದೆ. ಆಕೆ ರೊಬೆಲ್ ಗೆ ಹಣ ನೀಡಿದ್ದಾಳೆ. ನಾನು ನೃತ್ಯ ಮಾಡೋದು ತನುಶ್ರೀಗೆ ಇಷ್ಟವಿಲ್ಲವೆಂದು ರಾಖಿ ಹೇಳಿದ್ದಾಳೆ. ಅಲ್ಲದೇ ರೊಬೆಲ್ ಹಾಗೂ ತನುಶ್ರೀಯನ್ನು ಬಿಡುವುದಿಲ್ಲ. ಅಮೆರಿಕಾಕ್ಕೆ ಹೋಗಿ ಅವ್ರ ವಿರುದ್ಧ ಸೇಡು ತೀರಿಸಿಕೊಳ್ಳುತ್ತೇನೆಂದು ರಾಖಿ ಹೇಳಿದ್ದಾಳೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ದಯವಿಟ್ಟು ಶೇರ್ ಮಾಡಿ, very important: ಕುತೂಹಲ ಮೂಡಿಸಿದ ನಟ ಪ್ರಥಮ್ ಪೋಸ್ಟ್‌

ಹೃದಯಘಾತಕ್ಕೊಳಗಾದ ಮೃತ ವರೀಂದರ್ ಘುಮಾನ್ ಬಗ್ಗೆ ತಿಳಿಯದ ಕೆಲ ಅಚ್ಚರಿ ವಿಚಾರಗಳು ಇಲ್ಲಿದೆ

ಕಾಂತಾರ ಸೂಪರ್ ಹಿಟ್ ಬೆನ್ನಲ್ಲೇ ಸಿದ್ದಿವಿನಾಯಕನ ದರ್ಶನ ಪಡೆದ ರಿಷಬ್ ಶೆಟ್ಟಿ

My god, it was mind-blowing: ರಿಷಬ್ ನಟನೆ ನಿರ್ದೇಶನಕ್ಕೆ ಸ್ಟಾರ್ ಡೈರೆಕ್ಟರ್ ಅಟ್ಲೀ ಫಿದಾ

2013ರಿಂದ 2023ರ ನಡುವೆ ದಲಿತರ ಮೇಲಿನ ಅಪರಾಧ ಹೆಚ್ಚಳ: ಮಲ್ಲಿಕಾರ್ಜುನ ಖರ್ಗೆ

ಮುಂದಿನ ಸುದ್ದಿ
Show comments