Webdunia - Bharat's app for daily news and videos

Install App

ರಾಹುಲ್ ಗಾಂಧಿಯನ್ನು ವಿವಾಹವಾಗಲು ಬಯಸಿದ್ದೆ: ಕರೀನಾ ಕಪೂರ್(ವಿಡಿಯೋ ನೋಡಿ)

Webdunia
ಶುಕ್ರವಾರ, 22 ಜೂನ್ 2018 (14:30 IST)
ಮುಂಬೈ: ಬಾಲಿವುಡ್ ನ ಬ್ಯೂಟಿ ಕರೀನಾ ಕಪೂರ್, ರಾಹುಲ್ ಗಾಂಧಿಯವರ ಜೊತೆ ಡೇಟಿಂಗ್ ಮಾಡುವ ಇಷ್ಟವಿತ್ತು ಎಂದು ಸಂದರ್ಶನವೊಂದರಲ್ಲಿ ತಮ್ಮ ಆಸೆಯನ್ನು ವ್ಯಕ್ತಪಡಿಸಿದ್ದರು  ಈ ಸುದ್ದಿ ಎಲ್ಲೆಡೆ ವೈರಲ್ ಆಗಿದೆ.


2002 ರಲ್ಲಿ ಸಿಮಿ ಗರೆವಾಲ್ ಅವರ ಟಾಕ್ ಶೋ ‘ರೆಂಡೆಜ್ವಸ್ ವಿತ್ ಸಿಮಿ ಗರೆವಾಲ್’ನಲ್ಲಿ ಕರೀನಾ ಕಪೂರ್ ನಿರೂಪಕಿಯೊಂದಿಗೆ ಮಾತುಕತೆ ನಡೆಸುತ್ತಾ ಆಗ ತಾವು ಸಿಂಗಲ್ ಆಗಿರುವುದಾಗಿ ಹೇಳಿದ್ದರು. ನಾನು ಪ್ರೀತಿಯಲ್ಲಿ ಬೀಳುವ ದಿನಕ್ಕಾಗಿ ಹಾಗೂ ನನ್ನಂತೆಯೇ ಇರುವ ಬಾಳಸಂಗಾತಿಯನ್ನ ಭೇಟಿಯಾಗಲು ಕಾಯುತ್ತಿದ್ದೇನೆ ಎಂದಿದ್ದರು. ನಿರೂಪಕಿ ಸಿಮಿ ಗರೆವಾಲ್ ಅವರು 'ನೀವೀಗ ಯಾರ ಜತೆಗಾದರೂ ಡೇಟಿಂಗ್ ಮಾಡಲು ಬಯಸುತ್ತೀರಾ?' ಎಂದು ಕರೀನಾಗೆ ಪ್ರಶ್ನೆ ಕೇಳಿದ್ದರು.


ಈ ಸಂದರ್ಭದಲ್ಲಿ ಉತ್ತರಿಸಿದ ಕರೀನಾ 'ಇದೊಂದು ವಿವಾದಾತ್ಮಕ ವಿಚಾರ. ಬಹಿರಂಗವಾಗಿ ಹೇಳಬೇಕೋ ತಿಳಿಯುತ್ತಿಲ್ಲ. ಆದರೆ ನನಗೆ ರಾಹುಲ್ ಗಾಂಧಿ ಜತೆ ಡೇಟಿಂಗ್ ಮಾಡಲು ಇಷ್ಟ. ಅವರ ರಾಜಕೀಯ ಜೀವನದ ಕುರಿತಂತೆ ತಿಳಿದುಕೊಳ್ಳಬೇಕೆಂಬ ಕುತೂಹಲವಿದೆ, ದಿನಪತ್ರಿಕೆಯಲ್ಲಿ ಅವರ ಚಿತ್ರಗಳನ್ನು ನೋಡುತ್ತಿದ್ದೆ. ಅವರೊಂದಿಗೆ ಸಂಭಾಷಣೆ ನಡೆಸಲು ಇಷ್ಟಪಡುವೆ ಎಂದು ಹೇಳಿದ್ದರು.


ನನ್ನ ಕುಟುಂಬ ಚಿತ್ರರಂಗದ ಹಿನ್ನೆಲೆ ಹೊಂದಿದೆ ಮತ್ತು ಅವರು ರಾಜಕೀಯದ ಹಿನ್ನೆಲೆಯಿಂದ ಬಂದವರು. ಆದ್ದರಿಂದ ಬಹುಶಃ ನಾವು ಆಸಕ್ತಿದಾಯಕ ಸಂಭಾಷಣೆ ಮಾಡಬಹುದೇನೋ ಎಂದು ಹೇಳಿದ್ದರು.

ಕರೀನಾ ಕಪೂರ್ ಸದ್ಯ ನಟ ಸೈಫ್ ಅಲಿ ಖಾನ್ ಜತೆ ವಿವಾಹವಾಗಿ ಸಂತೋಷವಾಗಿದ್ದಾರೆ. ಈ ದಂಪತಿಗೆ ತೈಮೂರ್ ಅಲಿ ಖಾನ್ ಎಂಬ ಮುದ್ದಾದ ಗಂಡುಮಗುವಿದೆ.  ಅಲ್ಲದೆ ತಮ್ಮ ಮುಂದಿನ ಸಿನಿಮಾ 'ವೀರೆ ದಿ ವೆಡ್ಡಿಂಗ್' ಮೂಲಕ ಕಮ್​ ಬ್ಯಾಕ್ ಮಾಡಲು ತಯಾರಾಗಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನನ್ನ ಹೋರಾಟ ಮಹಿಳೆಯ ಮೇಲೆ ನಡೆದ ದೌರ್ಜನ್ಯದ ವಿರುದ್ಧ: ನಟಿ ರಿನಿ ಜಾರ್ಜ್‌

ಡಿಜಿಪಿ ಹುದ್ದೆಗೆ ಮರಳಿದ ನಟಿ ರನ್ಯಾ ರಾವ್‌ ಮಲ ತಂದೆಗೆ ಬಿಗ್‌ ಶಾಕ್‌

ಕೇರಳ ಕಾಂಗ್ರೆಸ್ ಯುವ ನಾಯಕನ ಮೇಲೆ ಇದೆಂಥಾ ಆರೋಪ, ನಟಿ ದೂರಿಗೆ ಪಕ್ಷ ಶಾಕ್‌

ಬರ್ತ್ ಡೇಗೆ ಪುರುಸೊತ್ತಿಲ್ಲ ಎಂದ ಡಾಲಿ ಧನಂಜಯ್: ಬಡವರ ಮಕ್ಕಳು ಈಗ ಕೈಗೇ ಸಿಗಲ್ಲ ಎಂದ ಫ್ಯಾನ್ಸ್

ಸಂಜನಾ ಬುರ್ಲಿ ಹೊಸ ಧಾರವಾಹಿಗೆ ನಾಯಕಿ, ವೀಕ್ಷಕರು ಇವರು ಬೇಡ ಅಂತಿರೋದ್ಯಾಕೆ

ಮುಂದಿನ ಸುದ್ದಿ
Show comments